ಕುರಿ ಮೇಕೆ ಸಾಕಾಣಿಕೆಗೆ ಸರ್ಕಾರದಿಂದ ಸಹಾಯಧನ ll Subsidy Scheme For Goat Farming 2024

Subsidy Scheme For Goat Farming 2024: ನಮಸ್ಕಾರ ಬಂಧುಗಳೇ ಹಿಂದಿನ ವರದಿಗೆ ಸ್ವಾಗತ ಇಂದಿನ ಲೇಖನದ ಮೂಲಕ ತಮಗೆಲ್ಲರಿಗೂ ತಿಳಿಸುವುದೇನೆಂದರೆ,ಕುರಿ ಮೇಕೆ ಸಾಕಾಣಿಕೆ ಗಾರರಿಗೆ ಸರಕಾರದಿಂದ ಗುಡ್ ನ್ಯೂಸ್..! ನೀವು ಕೂಡ ಕುರಿ ಅಥವಾ ಮೇಕೆಗಳನ್ನು ಖರೀದಿಸಲು ಸರ್ಕಾರದಿಂದ ಸಹಾಯಧನವನ್ನು ಪಡೆಯಬೇಕಾ..?ಹಾಗಿದ್ದರೆ ಈ ಲೇಖನವನ್ನು ಕೊನೆಯವರೆಗೂ ಓದಿ,ಸಂಪೂರ್ಣವಾದ ಮಾಹಿತಿಯನ್ನು ನೀಡಿದ್ದೇವೆ.



ಕುರಿ ಮೇಕೆ ಸಾಕಾಣಿಕೆಯನ್ನು ಮಾಡಲು ಜನರು ಸರ್ಕಾರದಿಂದ ಸಹಾಯಧನವನ್ನು ಪಡೆಯಲು ಪ್ರಯತ್ನಿಸುತ್ತಾರೆ,ಆದ್ದರಿಂದ ಅಂತಹ ಫಲಾನುಭವಿಗಳ ಸಲುವಾಗಿ ಸರ್ಕಾರದಿಂದ ಅರ್ಹ ರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ವತಿಯಿಂದ ಕುರಿ ಮೇಕೆ ಸಾಕಾಣಿಕೆಯನ್ನು ಮಾಡಲು ಬಯಸುವವರಿಗೆ ಅರ್ಹ ಮತ್ತು ಆಸಕ್ತರು ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಬಹುದು.

Subsidy Scheme For Goat Farming 2024

  • ಅಮೃತ ಸ್ವಾಭಿಮಾನಿ ಕುರಿಗಾಯಿ ಯೋಜನೆಯ ಅಡಿಯಲ್ಲಿ ಅರ್ಹರು ಕುರಿ ಮೇಕೆಗಳ ಸಾಕಾಣಿಕೆಗೆ 175 ಲಕ್ಷ ರೂಪಾಯಿಯನ್ನು ಆರ್ಥಿಕವಾಗಿ ನೆರವು ಪಡೆಯಬಹುದು.
  • ಕುರಿ ಮತ್ತು ಉಣ್ಣೆ ಉತ್ಪಾದಕ ಸಹಕರ ಸಂಘಗಳಲ್ಲಿ ಸದಸ್ಯರಾಗಿ ನೋಂದಾಯಿಸಿಕೊಂಡವರು ಒಂದು ಯೋಜನೆಯ ಲಾಭವನ್ನು ಪಡೆದುಕೊಳ್ಳಬಹುದು.ಸರ್ಕಾರವು ಚಿತ್ರದುರ್ಗ ಜಿಲ್ಲೆಗೆ ಒಟ್ಟು 706 ಘಟಕಗಳನ್ನು ನೀಡುವ ಉದ್ದೇಶವನ್ನು ಹೊಂದಿದೆ.ಪ್ರತಿ ಘಟಕಕ್ಕೆ1,75,000 ಲಕ್ಷ ರೂಪಾಯಿ ವೆಚ್ಚವನ್ನು ನಿರ್ಧರಿಸಲಾಗಿದೆ.
  • ರಾಜ್ಯ ಸರ್ಕಾರದಿಂದ 43,750 ರೂಪಾಯಿ ಸಹಾಯಧನವನ್ನು ನೀಡಲಾಗುತ್ತದೆ. 43,750 ರೂಪಾಯಿಯನ್ನು ಫಲಾನುಭವಿಗಳು ವಂತಿಕೆ ಮಾಡಬೇಕು. ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಯಿಂದ 87,500 ರೂಪಾಯಿ ಗೆ ಶೇಕಡಾ 9.26 ರಷ್ಟು ಬಡ್ಡಿ ದರದಲ್ಲಿ ಸಾಲ ಸೌಲಭ್ಯವನ್ನು ದೊರಕುತ್ತದೆ.ಯೋಜನೆಗೆ ಅರ್ಜಿ ಸಲ್ಲಿಸಿ, ಆಯ್ಕೆಯಾದ ಫಲಾನುಭವಿಗಳು 20+1 ಕುರಿ ಮೇಕೆಗಳನ್ನು ಖರೀದಿಯನ್ನು ಮಾಡಿ ಸ್ವಂತವಾಗಿ ಸಾಕಾಣಿಕೆ ಮಾಡಬಹುದು.

Subsidy Scheme For Goat Farming 2024 ಅರ್ಜಿ ಸಲ್ಲಿಸುವ ವಿಧಾನ:

  • ಯೋಜನೆಗೆ ಅರ್ಜಿ ಸಲ್ಲಿಸಲು ಬಯಸುವವರು ಕುರಿ ಮತ್ತು ಉಣ್ಣೆ ಉತ್ಪಾದಕ ಸಹಕಾರ ಸಂಘಗಳಲ್ಲಿ ಅರ್ಜಿ ನಮೂನೆಯನ್ನು ಸಿಗುತ್ತದೆ ಅರ್ಜಿ ನಮೂನೆಯನ್ನು ಭರ್ತಿ ಮಾಡಿ ಅಗತ್ಯ ದಾಖಲೆಗಳೊಂದಿಗೆ ಸಹಕಾರಿ ಸಂಘ ಅಥವಾ ಚಿತ್ರದುರ್ಗಪಶು ಆಸ್ಪತ್ರೆ ಆವರಣದಲ್ಲಿ ನಿಗಮದ ಸಹಕಾರ ನಿರ್ದೇಶಕರ ಕಚೇರಿಗೆ ಜುಲೈ 31ರ ಸಂಜೆ 5:30 ರ ಒಳಗಾಗಿ ಅರ್ಜಿ ಸಲ್ಲಿಸಬೇಕು.
  • ಅರ್ಜಿ ಸಲ್ಲಿಸುವವರು ಹೆಚ್ಚಿನ ಮಾಹಿತಿಗಾಗಿ ಕಚೇರಿಗೆ ಭೇಟಿಯನ್ನು ಮಾಡಬಹುದು. ದೂರವಾಣಿ ಸಂಖ್ಯೆ 08194-222718,ಮೊಬೈಲ್ ನಂಬರ್ 9448656231 ಗೆ ಕರೆ ಮಾಡಿ ಸಂಪೂರ್ಣವಾದ ಮಾಹಿತಿಯನ್ನು ಪಡೆದುಕೊಳ್ಳಬಹುದು.

Previous Post Next Post

Ads

Ads

نموذج الاتصال

×