ಭಾರತೀಯ ಏವಿಯೇಷನ್ ಸರ್ವೀಸೆಸ್'ನಿಂದ 3508 ಹುದ್ದೆಗೆ ಅರ್ಜಿ ಆಹ್ವಾನ: 10th, 12th ವಿದ್ಯಾರ್ಹತೆ

ಬಿಎಎಸ್‌ ಸಂಸ್ಥೆಯು ತನ್ನಲ್ಲಿ ಅಗತ್ಯ ಇರುವ ಕಸ್ಟಮರ್ ಸರ್ವೀಸ್‌ ಏಜೆಂಟ್, ಹೌಸ್‌ಕೀಪಿಂಗ್ ಹಾಗೂ ಲೋಡರ್ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಎಸ್‌ಎಸ್ಎಲ್‌ಸಿ, ದ್ವಿತೀಯ ಪಿಯುಸಿ ಪಾಸಾದವರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.




ಭಾರತೀಯ ಏವಿಯೇಷನ್ ಸರ್ವೀಸೆಸ್, ನವದೆಹಲಿಯು ಕಸ್ಟಮರ್ ಸರ್ವೀಸ್‌ ಏಜೆಂಟ್ (ಸಿಎಸ್‌ಎ), ಲೋಡರ್/ ಹೌಸ್‌ಕೀಪಿಂಗ್ ಹುದ್ದೆಗಳ ಭರ್ತಿಗೆ ಅಧಿಸೂಚನೆ ಬಿಡುಗಡೆ ಮಾಡಿದೆ. ಈ ಹುದ್ದೆಗಳಿಗೆ ಅರ್ಜಿ ಹಾಕಲು ಅಕ್ಟೋಬರ್ 31, 2024 ರವರೆಗೆ ಅವಕಾಶ ನೀಡಲಾಗಿದೆ. ಈ ಹುದ್ದೆಗಳಲ್ಲಿ ಆಸಕ್ತಿ ಇರುವವರು ಕೆಳಗಿನ ಮಾಹಿತಿಗಳನ್ನು ತಿಳಿದು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಿ.

ಹುದ್ದೆ ಹೆಸರು  and ಹುದ್ದೆಗಳ ಸಂಖ್ಯೆ

  • ಕಸ್ಟಮರ್ ಸರ್ವೀಸ್‌ ಏಜೆಂಟ್ (ಸಿಎಸ್‌ಎ):- 2653
  • ಲೋಡರ್/ ಹೌಸ್‌ಕೀಪಿಂಗ್:- 855

ಹುದ್ದೆವಾರು ವಿದ್ಯಾರ್ಹತೆ ವಿವರ

  • ಕಸ್ಟಮರ್ ಸರ್ವೀಸ್‌ ಏಜೆಂಟ್ (ಸಿಎಸ್‌ಎ): ಈ ಹುದ್ದೆಗೆ ದ್ವಿತೀಯ ಪಿಯುಸಿ / 12ನೇ ತರಗತಿಯನ್ನು ಪಾಸ್ ಮಾಡಿರಬೇಕು.
  • ಲೋಡರ್/ ಹೌಸ್‌ಕೀಪಿಂಗ್ : ಹತ್ತನೇ ತರಗತಿ ಅಥವಾ ಎಸ್‌ಎಸ್‌ಎಲ್‌ಸಿ ಪಾಸ್‌ ಮಾಡಿರಬೇಕು.

ಆಯ್ಕೆ ವಿಧಾನ 

ಅರ್ಜಿ ಸಲ್ಲಿಸಿದವರಿಗೆ ಲಿಖಿತ ಪರೀಕ್ಷೆ ಹಾಗೂ ಸಂದರ್ಶನ ನಡೆಸಿ ಆಯ್ಕೆ ಮಾಡಲಾಗುತ್ತದೆ. ವೇತನ ಶ್ರೇಣಿಯನ್ನು ಸಂದರ್ಶನದಲ್ಲಿ ನಿರ್ಧರಿಸಿ ತಿಳಿಸಲಾಗುತ್ತದೆ.

ಪ್ರಮುಖ ದಿನಾಂಕಗಳು

  • ಆನ್‌ಲೈನ್‌ ಅರ್ಜಿ ಸಲ್ಲಿಸಲು ಕೊನೆ ದಿನಾಂಕ:- 31-10-2024
  • ಪರೀಕ್ಷಾ ಶುಲ್ಕ ಪಾವತಿಸಲು ಕೊನೆ ದಿನಾಂಕ:- 31-10-2024
  • ಬಿಎಎಸ್‌ ವೆಬ್‌ಸೈಟ್‌ನಲ್ಲಿ ಅಡ್ಮಿಟ್‌ ಕಾರ್ಡ್‌ ಡೌನ್‌ಲೋಡ್‌ ಮಾಡಲು ಅವಕಾಶ:- ಮುಂದಿನ ದಿನಗಳಲ್ಲಿ ಬಿಎಎಸ್‌ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುತ್ತದೆ.
  • ಪರೀಕ್ಷೆ ದಿನಾಂಕ:- 01-12-2024 ಮತ್ತು 08-12-2024

ಪರೀಕ್ಷೆ ಮಾದರಿ

  • ಆಫ್‌ಲೈನ್‌ ಅಥವಾ ಕಂಪ್ಯೂಟರ್ ಆಧಾರಿತ ಪರೀಕ್ಷೆ.
  • ಭಾರತೀಯ ಏವಿಯೇಷನ್ ಸರ್ವೀಸೆಸ್‌ನ ಈ ಹುದ್ದೆಗಳಿಗೆ ಆಬ್ಜೆಕ್ಟಿವ್ ಮಾದರಿಯ ಬಹುಆಯ್ಕೆ ಪ್ರಶ್ನೆಗಳನ್ನು ಕೇಳಲಾಗುತ್ತದೆ. 90 ನಿಮಿಷ ಪರೀಕ್ಷೆ ಇರುತ್ತದೆ. ಪರೀಕ್ಷೆ ಸಮಯ, ಕೇಂದ್ರ, ಶಿಫ್ಟ್‌, ಫಲಿತಾಂಶ ದಿನಾಂಕವನ್ನು ಮುಂದಿನ ದಿನಗಳಲ್ಲಿ ಬಿಡುಗಡೆ ಮಾಡಲಾಗುತ್ತದೆ. ಪರೀಕ್ಷೆಯ ಪಠ್ಯಕ್ರಮ ಆಯಾ ವಿದ್ಯಾರ್ಹತೆಗಳ ಮಟ್ಟದ್ದಾಗಿರುತ್ತದೆ, ಪಾರ್ಟ್‌ ಎ, ಪಾರ್ಟ್‌ ಬಿ ಎಂದು ಎರಡು ವಿಭಾಗದಲ್ಲಿ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಒಟ್ಟು 100 ಅಂಕಗಳಿಗೆ ಪರೀಕ್ಷೆ ನಡೆಸಲಾಗುತ್ತದೆ.
ಈ ಹುದ್ದೆಗಳಿಗೆ ಆನ್‌ಲೈನ್‌ ಮೂಲಕ ಮಾತ್ರ ಅರ್ಜಿ ಸಲ್ಲಿಸಬಹುದು. ಅರ್ಹರು ಮತ್ತು ಆಸಕ್ತರು ಭಾರತೀಯ ಏವಿಯೇಷನ್‌ ಸರ್ವೀಸೆಸ್‌ ಅಫೀಶಿಯಲ್ ವೆಬ್‌ಸೈಟ್ www.bhartiyaaviation.in ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು. ಆನ್‌ಲೈನ್‌ ಹೊರತು ಇತರೆ ಯಾವುದೇ ಮಾದರಿಯಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಇಲ್ಲ.

ಅರ್ಜಿ ಸಲ್ಲಿಸಲು ಬೇಕಾದ ವಿವರ, ದಾಖಲೆಗಳು

ಇಮೇಲ್‌ ವಿಳಾಸ, ಮೊಬೈಲ್ ನಂಬರ್, ಭಾವಚಿತ್ರ ಸ್ಕ್ಯಾನ್ ಕಾಪಿ, ಅಭ್ಯರ್ಥಿ ಸಹಿ ಸ್ಕ್ಯಾನ್ ಕಾಪಿ, ವಿದ್ಯಾರ್ಹತೆ ದಾಖಲೆಗಳು, ಆಧಾರ್ ನಂಬರ್, ಇತರೆ.

ಅಪ್ಲಿಕೇಶನ್ ಶುಲ್ಕ ವಿವರ

  • ಕಸ್ಟಮರ್ ಸರ್ವೀಸ್ ಏಜೆಂಟ್ : ಸಾಮಾನ್ಯ ಕೆಟಗರಿ, ಇತರೆ ಹಿಂದುಳಿದ ವರ್ಗದವರಿಗೆ, ಇತರೆ ಎಲ್ಲ ಕೆಟಗರಿಯವರಿಗೆ ರೂ.380.
  • ಲೋಡರ್/ ಹೌಸ್‌ಕೀಪಿಂಗ್ : ಸಾಮಾನ್ಯ ಕೆಟಗರಿ, ಇತರೆ ಹಿಂದುಳಿದ ವರ್ಗದವರಿಗೆ, ಇತರೆ ಎಲ್ಲ ಕೆಟಗರಿಯವರಿಗೆ ರೂ.340.
ಇತರೆ ಹೆಚ್ಚಿನ ಮಾಹಿತಿಗಳಿಗಾಗಿ ಭಾರತೀಯ ಏವಿಯೇಷನ್‌ ಸರ್ವೀಸೆಸ್‌ ವೆಬ್‌ ವಿಳಾಸ https://bhartiyaaviation.in/ ಗೆ ಭೇಟಿ ನೀಡಲು ಸೂಚಿಸಲಾಗಿದೆ.

ವಯಸ್ಸಿನ ಅರ್ಹತೆ ಯಾವುದೇ ಹುದ್ದೆಗೆ ಅರ್ಜಿ ಸಲ್ಲಿಸಲು ಕನಿಷ್ಠ 18 ವರ್ಷ ಮೀರಿರಬಾರದು. ಕಸ್ಟಮರ್ ಸರ್ವೀಸ್ ಏಜೆಂಟ್ ಹುದ್ದೆಗೆ ಗರಿಷ್ಠ 28 ವರ್ಷ ಮೀರಿರಬಾರದು. ಲೋಡರ್/ ಹೌಸ್‌ಕೀಪಿಂಗ್ ಹುದ್ದೆಗೆ ಗರಿಷ್ಠ 33 ವರ್ಷ ಮೀರಿರಬಾರದು. ಎಸ್‌ಸಿ / ಎಸ್‌ಟಿ ವರ್ಗದವರಿಗೆ 5 ವರ್ಷ ವಯಸ್ಸಿನ ಸಡಿಲಿಕೆ, ಒಬಿಸಿ ವರ್ಗದವರಿಗೆ 3 ವರ್ಷ ವಯಸ್ಸಿನ ಸಡಿಲಿಕೆ ನಿಯಮ ಅನ್ವಯವಾಗಲಿದೆ.


Previous Post Next Post

Ads

Ads

نموذج الاتصال

×