ಇಂದು ಗೃಹಲಕ್ಷ್ಮಿ ಯೋಜನೆ (Gruha Lakshmi Yojana) ಮತ್ತು ಶಕ್ತಿ ಯೋಜನೆ (Shakti Yojana) ರಾಜ್ಯದಲ್ಲಿ ಬಹಳಷ್ಟು ಹವಾ ಉಂಟು ಮಾಡಿದೆ.ಹೌದು ಮಹಿಳೆಯರು ಸಕ್ರಿಯವಾಗಿ ಈ ಯೋಜನೆಗೆ ಧನಾತ್ಮಕ ಪ್ರತಿಕ್ರಿಯೆ ನೀಡ್ತಾ ಬರ್ತಾ ಇದ್ದಾರೆ. ತಿಂಗಳಿಗೆ ಮನೆಯ ಹಿರಿಯ ಮಹಿಳೆಗೆ ಎರಡು ಸಾವಿರ ರೂ ನೀಡುವ ಮೂಲಕ ಆರ್ಥಿಕ ವಾಗಿ ಈ ಯೋಜನೆ ಬಹಳಷ್ಟು ಮಹಿಳೆಯರಿಗೆ ನೆರವಾಗುತ್ತದೆ. ಈಗಾಗಲೇ ನೊಂದಣಿ ಮಾಡಿದ ಮಹಿಳಾ ಫಲಾನುಭವಿಗಳ ಖಾತೆಗೆ ಹನ್ನೊಂದು ಕಂತಿನ ವರೆಗೆ ಹಣ ಜಮೆಯಾಗಿದ್ದು ಇದೀಗ ಮಹಿಳೆಯರಿಗೆ ಗುಡ್ ನ್ಯೂಸ್ ನೀಡಲು ಕೇಂದ್ರ ದಿಂದ ಹೊಸ ಯೋಜನೆ ಜಾರಿ ಮಾಡಿದೆ.ಯಾವುದು ಈ ಯೋಜನೆ ಎಂದು ತಿಳಿಯಲು ಈ ಲೇಖನ ಪೂರ್ತಿಯಾಗಿ ಓದಿರಿ.
ಇಂದು ಮಹಿಳೆಯರ ಉತ್ತೇಜನ ಕ್ಕಾಗಿ ಸರಕಾರ ಹಲವು ರೀತಿಯ ಬೆಂಬಲ ನೀಡುತ್ತಿದೆ. ಆರ್ಥಿವಾಗಿಯು ಬೆಂಬಲ ನೀಡುತ್ತಿದೆ. ಮಹಿಳೆಯರು ಉದ್ಯೋಗ ವಂತರು ಆಗಬೇಕೆಂದು ಇದಕ್ಕಾಗಿ ಸ್ವ ಉದ್ಯಮ ತರಭೇತಿ, ಇದಕ್ಕೆ ಸಹಾಯಧನ ಇತ್ಯಾದಿ ನೀಡುತ್ತಿದೆ. ಅದೇ ರೀತಿ ಮನೆಯಲ್ಲೇ ಸ್ವ ಉದ್ಯಮ ಮಾಡಲು ಮಹಿಳೆಯರಿಗೆ ಹೊಲಿಗೆ ಯಂತ್ರ ವನ್ನು ವಿತರಣೆ ಮಾಡುತ್ತಿದೆ. ಈ ಸೌಲಭ್ಯ ವನ್ನು ಲಕ್ಷಾಂತರ ಮಹಿಳೆಯರು ಪಡೆದುಕೊಂಡಿದ್ದಾರೆ.
ಇಂದು ಟೈಲರಿಂಗ್‌ನಲ್ಲಿ ಆಸಕ್ತಿ ಇದ್ದವರು ಮತ್ತು ಪ್ರತಿಭೆಯನ್ನ ಹೊಂದಿರುವ ಅನೇಕ ಮಹಿಳೆಯರು ಇದ್ದಾರೆ. ಆದರೆ ಬಹುತೇಕರಿಗೆ ಯಂತ್ರಗಳನ್ನ ಖರೀದಿಸಲು ಸಾಧ್ಯವಾಗುವುದಿಲ್ಲ.ಹಾಗಾಗಿ 2023-24 ರ ಸಾಲಿನಲ್ಲಿ ವೃತ್ತಿನಿರತ ಗ್ರಾಮೀಣ ಗುಡಿ ಕೈಗಾರಿಕೆ ಮಾಡುತ್ತಿರುವ ಅರ್ಹ ಅಭ್ಯರ್ಥಿಗಳು ಈ ಯೋಜನೆಗೆ ಅರ್ಜಿ ಹಾಕಬಹುದಾಗಿದೆ. ಯೋಜನೆಯಡಿಯಲ್ಲಿ, ಹೊಲಿಗೆ ಯಂತ್ರಗಳನ್ನು ಖರೀದಿಸಲು ರೂ 15000 ವರೆಗೆ ಮಹಿಳೆಯರಿಗೆ ಸಹಾಯಧನ ನೀಡಲಾಗುತ್ತದೆ.
ಈ ಅರ್ಹತೆ ಬೇಕು
- ಉಚಿತ ಹೊಲಿಗೆ ಯಂತ್ರ ಪಡೆಯಲು ಅರ್ಜಿದಾರರು ಭಾರತದ ನಾಗರಿಕರಾಗಿದ್ದರೆ ಅರ್ಜಿ ಹಾಕಬಹುದಾಗಿದೆ.
- ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆ (PM Vishwakarma Yojana) ಅಡಿಯಲ್ಲಿ ಟೈಲರ್ ಆಗಿ ಕೆಲಸ ಮಾಡುವ ಯಾರಾದರೂ ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು.
- ಅರ್ಜಿದಾರರು 18 ವರ್ಷಕ್ಕಿಂತ ಮೇಲ್ಪಟ್ಟವರಾಗಿರಬೇಕು.
- ಅಭ್ಯರ್ಥಿಯು ಬಡತನ ರೇಖೆಗಿಂತ ಕೆಳಗಿರಬೇಕು.ಕುಟುಂಬದ ಆದಾಯವು 12,000 ರೂಪಾಯಿಕ್ಕಿಂತ ಕಡಿಮೆ ಇರಬೇಕು.
ಈ ದಾಖಲೆ ಬೇಕು:
- ಆಧಾರ್ ಕಾರ್ಡ್
- ರೇಷನ್ ಕಾರ್ಡ್
- ಆದಾಯ ಪ್ರಮಾಣ ಪತ್ರ
- ಜಾತಿ ಪ್ರಮಾಣ ಪತ್ರ
- ಪಾಸ್‌ಪೋರ್ಟ್ ಗಾತ್ರದ ಭಾವಚಿತ್ರ
- ಹೊಲಿಗೆ ತರಬೇತಿ ಪಡೆದ ಪ್ರಮಾಣ ಪತ್ರ
ಉಚಿತ ಹೊಲಿಗೆ ಯಂತ್ರ ಯೋಜನೆ (Free Sewing Machine Scheme) ಗೆ ಅರ್ಜಿ ಸಲ್ಲಿಸಲು ಮೊದಲು ಅಧಿಕೃತ ವೆಬ್‌ಸೈಟ್ https://pmvishwakarma.gov.in ಗೆ ಹೋಗಿ ನೋಂದಾವಣೆ ಮಾಡಿ.