Advertisement

header ads

ಗೃಹಜ್ಯೋತಿ ಫಲಾನುಭವಿಗಳಿಗೆ ಶೂನ್ಯ ಬಿಲ್‌ ವಿತರಣೆ ಪ್ರಾರಂಭ! ನಿಮಗೆ Zero ಬಿಲ್‌ ಯಾವಾಗ ಬರಲಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ


ಹಲೋ ಸ್ನೇಹಿತರೆ, ಇಂದಿನ ನಮ್ಮ ಲೇಖನಕ್ಕೆ ಎಲ್ಲರಿಗೂ ಸ್ವಾಗತ, ಕರ್ನಾಟಕ ರಾಜ್ಯಸರ್ಕಾರದ ಪ್ರಮುಖ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಜ್ಯೋತಿ ಯೋಜನೆಗೆ ಈಗಾಗಲೇ ಚಾಲನೆ ದೊರೆತಿದ್ದು ಈ ಯೋಜನೆಯಡಿಯಲ್ಲಿ ಶೂನ್ಯ ಬಿಲ್‌ ಅನ್ನು ಕೊಡಲು ಪ್ರಾರಂಭಿಸಲಾಗಿದೆ, ಈ ಬಿಲ್‌ ಹೇಗೆ ಬರಲಿದೆ ಹಾಗೂ ಯಾರಿಗೆ ಈ ಲಾಭ ಮತ್ತು ನಿಮಗೆ ಬಿಲ್‌ ಬಂದಿಲ್ಲ ಎಂದರೆ ಯಾವಾಗ ಬಿಲ್‌ ಬರಲಿದೆ ಎಂಬ ಸಂಪೂರ್ಣ ಮಾಹಿತಿಗಾಗಿ ಈ ಲೇಖನವನ್ನು ಮಿಸ್‌ ಮಾಡದೆ ಕೊನೆಯವರೆಗೂ ಓದಿ.


ಎಸ್ಕಾಂ ಗಳಿಂದ ಈಗಾಗಲೇ ಶೂನ್ಯ ಬಿಲ್ ವಿತರಣೆ ಆರಂಭ ಮಾಡಲಾಗಿದ್ದು ಈ ವಿಭಾಗದ ವ್ಯಾಪ್ತಿಯಲ್ಲಿಇಲ್ಲಿಯವರೆಗೆ ಅರ್ಹ ಗ್ರಾಹಕರಿಗೆ ಶೂನ್ಯ ಬಿಲ್ ವಿತರಣೆ ಮಾಡಲಾಗಿದೆ. ಆಗಸ್ಟ್ 1 ರಿಂದ ಶೂನ್ಯ ಬಿಲ್ ವಿತರಣೆ ಆರಂಭವಾಗಿದ್ದು ಒಂದೇ ದಿನದಲ್ಲಿ 5 ಲಕ್ಷ ಜನರಿಗೆ ಶೂನ್ಯ ಬಿಲ್ ಕೋಡಲಾಗಿದೆ ಎಂದು ಬೆಸ್ಕಾಂ ಅಧಿಕಾರಿಗಳು ಮಾಹಿತಿ ಹಂಚಿಕೊಂಡಿದ್ದಾರೆ.

ಬೆಸ್ಕಾಂ ವ್ಯಾಪ್ತಿಯಲ್ಲಿನ ಎಲ್ಲಾ ಜಿಲ್ಲೆಗಳು ಸೇರಿ 89 ಲಕ್ಷ ಗೃಹ ಬಳಕೆಯ ವಿದ್ಯುತ್‌ ಹೊಂದಿದ್ದು. ಈ ಪೈಕಿ ಗೃಹ ಜ್ಯೋತಿ ಯೋಜನೆಯಡಿ ಉಚಿತ ವಿದ್ಯುತ್ ಪಡೆಯಲು ಜುಲೈ 27ರ ವರೆಗೆ 55 ಲಕ್ಷ ಗ್ರಾಹಕರು ಅರ್ಜಿ ಸಲ್ಲಿಸಿ ನೋಂದಾವಣೆ ಮಾಡಿಕೊಂಡಿದ್ದಾರೆ. ಇದರಲ್ಲಿ ಮೊದಲ ದಿನವೇ 5 ಲಕ್ಷ ಮಂದಿಗೆ ಶೂನ್ಯ ಬಿಲ್ ನೀಡಲಾಗಿದೆ ಮುಂದಿನ 2 ರಿಂದ 3 ವಾರದಲ್ಲಿ ಎಲ್ಲಾ ಗ್ರಾಹಕರಿಗೆ ಶೂನ್ಯ ಬಿಲ್ ಕೊಡುವ ಗುರಿಯನ್ನು ಬೆಸ್ಕಾಂ ಹೊಂದಿದೆ. 

ಶೂನ್ಯ ಬಿಲ್‌ ಮಾದರಿ

ಗ್ರಾಹಕರಲ್ಲಿ ಯಾವುದೇ ಗೊಂದಲ ಬೇಡ

ಹಲವು ಗ್ರಾಹಕರು ನಾವು ಅರ್ಜಿ ಸಲ್ಲಿಸಿದ್ದೇವೆ ಅದರೆ ಅರ್ಜಿ ಸ್ಥಿತಿ ಚೆಕ್ ಮಾಡಿದಾಗ ಇನ್ನು ನಿಮ್ಮ ಅರ್ಜಿ ಪ್ರೊಸೆಸಿಂಗ್ ನಲ್ಲಿದೆ(Your application for GruhaJyothi Scheme is received and sent to ESCOM for processing) ಎಂದು ತೋರಿಸುತ್ತದೆ Approval ಆಗಿದೆ ಎಂದು ತೋರಿಸುವುದಿಲ್ಲ ಇದರಿಂದ ನಮಗೆ ಈ ತಿಂಗಳ ಶೂನ್ಯ ಬಿಲ್ ಬರುತ್ತದೆಯೋ ಅಥವಾ ಇಲ್ಲವೋ ಎಂದು ಗೊಂದಲದಲ್ಲಿದವರಿಗೆ ಬೆಸ್ಕಾಂ ಅಧಿಕಾರಿಗಳು ಸೂಕ್ತ ಮಾಹಿತಿ ಹಂಚಿಕೊಂಡುದ್ದು ಈ ರೀತಿ ಬಂದರೆ ಗ್ರಾಹಕರು ಆತಂಕ ಪಡಬೇಕಾಗಿಲ್ಲ ಅರ್ಜಿಗಳ ಪ್ರಕ್ರಿಯೆಯೂ ಪೂರ್ಣಗೊಳ್ಳಲಿದೆ. ಗ್ರಾಹಕರಿಗೆ ಅವರ ವಿದ್ಯುತ್ ಬಿಲ್‌ ಅವಧಿ ಆಧಾರದ ಮೇಲೆ ಮೀಟರ್ ರೀಡಿಂಗ್ ಮಾಡಿ ಶೂನ್ಯ ಬಿಲ್ ನೀಡಲಾಗುತ್ತದೆ. 

ಯಾವಾಗ ಬರಲಿದೆ ಶೂನ್ಯ ಬಿಲ್?

ಒಂದು ಕಡೆ ತಿಂಗಳ ಮೊದಲ ವಾರದಲ್ಲಿ ಬಿಲ್ ವಿತರಿಸಿದರೆ ಮತ್ತೊಂದು ಕಡೆ ಎರಡನೇ ವಾರದಲ್ಲಿ ಬಿಲ್ ವಿತರಿಸಲಾಗುತ್ತದೆ. ಉದಾಹರಣೆಗೆ ಜುಲೈ 1 ರಿಂದ ಆಗಸ್ಟ್ 1, ಜುಲೈ 10ರಿಂದ ಆಗಸ್ಟ್ 10 ಹೀಗೆ ಮೀಟರ್ ರೀಡಿಂಗ್ ಅವಧಿಯಲ್ಲಿ ಒಂದು ಕಡೆಯಿಂದ ಮತ್ತೊಂದು ಕಡೆ ವ್ಯತ್ಯಾಸವಿರುತ್ತದೆ. ಅವರ ಸರದಿ ಬಂದಾಗ ಸಿಬ್ಬಂದಿ ಮೀಟರ್ ರೀಡ್ ಮಾಡಿ ಅರ್ಹರಿಗೆ ಉಚಿತ ಬಿಲ್ ನೀಡುತ್ತಾರೆ.

ಶೂನ್ಯ ಬಿಲ್ ಪಾವತಿ ಲೆಕ್ಕಾಚಾರ ಹೇಗೆ ಮಾಡಲಾಗುತ್ತದೆ?

ಗ್ರಾಹಕರು ಹಿಂದಿನ ವರ್ಷದ ಒಟ್ಟು ಸರಾಸರಿ ಬಳಕೆಗಿಂತ ಶೇ.10ರಷ್ಟು ಹೆಚ್ಚು ಬಳಕೆಯವರೆಗೆ ಮಾತ್ರ ಶೂನ್ಯ ಬಿಲ್ ಕೊಡಲಾಗುತ್ತದೆ. ಒಂದು ವೇಳೆ ಒಂದು ತಿಂಗಳು 200 ಯುನಿಟ್‌ಗಿಂತ ಹೆಚ್ಚು ಬಳಕೆ ಮಾಡಿದ್ದರೆ ಈ ತಿಂಗಳು ಪೂರ್ಣ ಶುಲ್ಕ ಪಾವತಿಸಬೇಕು ಶೂನ್ಯ ಬಿಲ್ ಬರುವುದಿಲ್ಲ.

ಅರ್ಜಿ ಸ್ಥಿತಿ ಚೆಕ್ ಮಾಡಿದಾಗ ಈ ರೀತಿ ಬಂದರೆ ಮತ್ತೊಮ್ಮೆ ಅರ್ಜಿ ಸಲ್ಲಿಸಬೇಕು:

ಈ ಲಿಂಕ್ ಮೇಲೆ ಕ್ಲಿಕ್ ಮಾಡಿ https://sevasindhu.karnataka.gov.in/StatucTrack/Track_Status ನಿಮ್ಮ ಎಸ್ಕಾಂ ಆಯ್ಕೆ ಮಾಡಿಕೊಂದು ನಿಮ್ಮ ಅಕೌಂಟ್ ಐಡಿಯನ್ನು ನಮೂದಿಸಿ check status ಮೇಲೆ ಕ್ಲಿಕ್ ಮಾಡಿದಾಗ Data Not Found. Please Register to GruhaJyothi Scheme ಎಂದು ತೋರಿಸಿದರೆ ನೀವು ಅರ್ಜಿ ಸಲ್ಲಿಸಬೇಕಾಗುತ್ತದೆ. ಏಕೆಂದರೆ ನಿಮ್ಮ ಅರ್ಜಿ ಯಶಸ್ವಿಯಾಗಿ ಸಲ್ಲಿಕೆಯಾಗಿರುವುದಿಲ್ಲ ಅದ ಕಾರಣ.

ಆಗಸ್ಟ್ ತಿಂಗಳಲ್ಲಿ ಶೂನ್ಯ ಬಿಲ್ ಪಡೆಯಲು ಈ ದಿನಾಂಕದ ಒಳಗೆ ಅರ್ಜಿ ಸಲ್ಲಿಸಿರಬೇಕು

ಜುಲೈ 27ರ ಒಳಗೆ ಅರ್ಜಿ ಸಲ್ಲಿಸಿದವರಿಗೆ ಮಾತ್ರ ಆಗಸ್ಟ್ ತಿಂಗಳಲ್ಲಿ ಶೂನ್ಯ ಬಿಲ್ ವಿತರಣೆ ಮಾಡಲಾಗುತ್ತದೆ ಏಕೆಂದರೆ ಪ್ರತಿ ತಿಂಗಳ ಬಿಲ್ ಅವಧಿಯು 25 ರಿಂದ ಮರು ತಿಂಗಳಿನ 25ರವರೆಗೆ ಇರುತ್ತದೆ ಜುಲೈ 27ರ ನಂತರ ಅರ್ಜಿ ಸಲ್ಲಿಸಿದವರಿಗೆ ಸೆಪ್ಟಂಬರ್ ನಲ್ಲಿ ಶೂನ್ಯ ಬಿಲ್ ಸಿಗಲಿದೆ ಅದೇ ರೀತಿ ಆಗಸ್ಟ್ 27 ರ ನಂತರ ಅರ್ಜಿ ಸಲ್ಲಿಸಿದರೆ ಅಕ್ಟೋಬರ್ ತಿಂಗಳಲ್ಲಿ ಶೂನ್ಯ ಬಿಲ್ ನೀಡಲಾಗುತ್ತದೆ. ಅದ್ದರಿಂದ ಇನ್ನೂ ಅರ್ಜಿ ಸಲ್ಲಿಸದವರು ಬೇಗನೆ ಅರ್ಜಿ ಸಲ್ಲಿಸಿ, ಯೋಜನೆಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಿಲ್ಲ ಅದರೆ ಶೂನ್ಯ ಬಿಲ್ ಪಡೆಯಲು ಬೇಗ ಅರ್ಜಿ ಸಲ್ಲಿಸುವುದು ಅವಶ್ಯಕವಾಗಿದೆ.

Post a Comment

0 Comments