ಗೃಹ ಜ್ಯೋತಿ ಅರ್ಜಿ Status ಚೇಕ್‌ ಮಾಡಿ | Karnataka Gruha Jyothi Application Status Check @Sevasindhugs.karnataka.gov.in 2023

ನೀವೂ ಗೃಹ ಜ್ಯೋತಿ ಯೋಜನೆ ಅರ್ಜಿ ಸಲ್ಲಿಸಿದ್ದೀರಾ? ಹಾಗಾದರೆ ನಿಮಗಿಲ್ಲಿದೆ ಮಹತ್ವದ ಮಾಹಿತಿ. ಮುಂಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಕರ್ನಾಟಕ ಸರ್ಕಾರ 200 ಯುನಿಟ್‌ ವರೆಗೆ ಉಚಿತ ವಿದ್ಯುತ್‌ ನೀಡುವ ಯೋಜನೆಯನ್ನು ಜಾರಿಗೆ ತಂದಿದೆ. ಅದರಂತೆ ಜೂ. 18 ರಿಂದ ಅರ್ಜಿ ಸಲ್ಲಿಕೆ ಪ್ರರಂಭವಾಗಿದೆ.

ಈಗಾಗಲೇ ನೀವು ಕೂಡ ಗೃಹ ಜ್ಯೋತಿ ಯೋಜನೆಯ ಅರ್ಜಿಯನ್ನು ಸೇವಾ ಸಿಂಧು ಪೋರ್ಟಲ್‌ ಮೂಲಕ ಸಲ್ಲಿರುತ್ತಿರಿ ಎಂದು ಭಾವಿಸುತ್ತೇವೆ, ಹಾಗಿದ್ದರೆ ನೀವು ನಿಮ್ಮ ಅರ್ಜಿ ಸ್ಥೀತಿಯನ್ನು ನೋಡಬಹುದು. ಹಂತ ಹಂತವಾಗಿ Application Status ಅನ್ನು ಹೇಗೆ Check ಮಾಡುವುದು ಎಂದು ತಿಳಿಸಲಿದ್ದೇವೆ. ಈ ಲೇಖನವನ್ನು ಓದಿ.


ಗೃಹ ಜ್ಯೋತಿ ಅಪ್ಲಿಕೇಶನ್ ಸ್ಥಿತಿಯನ್ನು ಪರಿಶೀಲಿಸುವುದು ಹೇಗೆ?

200 ಯುನಿಟ್‌ ಉಚಿತ ವಿದ್ಯುತ್‌ ಪಡೆಯಲು ಗೃಹ ಜ್ಯೋತಿ ಯೋಜನೆಯ ಆನ್‌ಲೈನ್‌ ಅರ್ಜಿ ಸಲ್ಲಿಸಿದ್ದಲ್ಲಿ. ಈ ಕೇಳಗೆ ನೀಡಿರುವ ಸ್ಟೇಪ್‌ಗಳ ಮೂಲಕ Gruha Jyothi Application Status Check ಮಾಡಬಹುದು.

  • Step 1: ಮೊದಲಿಗೆ ಕೇಳಗೆ ನೀಡಿರುವ ಸೇವಾ ಸಿಂಧು ಪೋರ್ಟಲ್‌ ಅಧಿಕೃತ ಲಿಂಕ್‌ ಮೇಲೆ ಕ್ಲಿಕ್‌ ಮಾಡಿ.
  • Step 2: ಅಲ್ಲಿ Track Your Application Status ಎಂದಿರುತ್ತದೆ.
  • Step 3: ಕೇಳಗೆ ಎರಡು ಬಾಕ್ಸ್‌ಗಳಿವೆ. ಮೊಲನೇ ಬಾಕ್ಸ್‌ನಲ್ಲಿ Select ESCOM Name ಅಂತ ಇರುತ್ತದೆ. ಅದರ ಮೇಲೆ ಕ್ಲಿಕ್‌ ಮಾಡಿ ನಿಮ್ಮ ESCOM ಯಾವುದು ಎಂಬುದನ್ನು ಆಯ್ಕೆ ಮಾಡಿ. ಉದಾ: BESCOM, CESC, GESCOM, HESCOM, MESCOM, HRESC ಅಂತ ಇರುತ್ತವೆ.
  • Step 4: ಎರಡನೇ ಬಾಕ್ಸ್‌ನಲ್ಲಿ Enter Your Account ID ಅಂತಿರುತ್ತದೆ. ಅಲ್ಲಿ ನೀವು ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ನಮೂದಿಸಿದ್ದ Account ID ಯನ್ನು ಎಂಟರ್‌ ಮಾಡಿ.
  • Step 5: ಕೊನೆಯದಾಗಿ Check Status ಎಂಬ ಹಸಿರು ಬಟನ್‌ ಮೇಲೆ ಕ್ಲಿಕ್‌ ಮಾಡಿ. ಆಗ ನಿಮ್ಮ “Gruha Jyothi Application Status” ಗೊತ್ತಾಗುತ್ತದೆ.



ಗೃಹ ಜ್ಯೋತಿ Application Status ನಲ್ಲಿ ನಿಮ್ಮ Application ರೆಫರೆನ್ಸ್ ನಂಬರ್‌, Account ID, ಅರ್ಜಿ ಸಲ್ಲಿಸಿದ ದಿನಾಂಕ, ಮತ್ತು ಅರ್ಜಿ ಸ್ಥೀತಿ ಇರುತ್ತದೆ.


ಗೃಹ ಜ್ಯೋತಿ ಅಪ್ಲಿಕೇಶನ್ ಸ್ಥಿತಿ: 👉ಪರಿಶೀಲಿಸಿ👈


ಕೋಟಿ ಧಾಟಿದ ಗೃಹ ಜ್ಯೋತಿ ಅರ್ಜಿ ನೋಂದಣಿ

ಜೂನ್‌ 18 ರಿಂದ ಗೃಹ ಜ್ಯೋತಿ ಯೋಜನೆ ಅರ್ಜಿ ಸಲ್ಲಿಕೆ ಪ್ರಾರಂಭವಾದಾಗಿನಿಂದ ಇಲ್ಲಿಯವರೆಗೆ ಒಂದು ಕೋಟಿಗೂ ಅಧಿಕ ಗ್ರಾಹಕರು ಆನ್‌ಲೈನ್‌ ಮೂಲಕ ಯಶಸ್ವಿಯಾಗಿ ಅರ್ಜಿಗಳನ್ನು ಸಲ್ಲಿಕೆ ಮಾಡಿದ್ದಾರೆ. ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಟ್ವಿಟ್‌ ಮಾಡಿದ್ದಾರೆ.

ಇನ್ನೂ ಗೃಹ ಜ್ಯೋತಿ ಅರ್ಜಿ ಸಲ್ಲಿಸಿಲ್ಲವೇ?

ಸರ್ಕಾರ ಜಾರಿಗೆ ತಂದಿರುವ 200 ಯುನಿಟ್‌ ವರೆಗಿನ ಉಚಿತ ಯೋಜನೆಯ ಲಾಭ ಪಡೆಯಲು ಅರ್ಜಿ ಸಲ್ಲಿಸಿ ನೋಂದಣಿ ಮಾಡಿಕೊಳ್ಳುವುದು ಕಡ್ಡಾಯವಾಗಿರುತ್ತದೆ. ಇಲ್ಲಿಯವರೆಗೆ ಯಾರು ಅರ್ಜಿ ಸಲ್ಲಿಸಿಲ್ಲ ಅಂತವರು ಜುಲೈ 25 ರ ಒಳಗೆ ಅರ್ಜಿ ಸಲ್ಲಿಸಿದರೆ ಮಾತ್ರ ಮುಂದಿನ ತಿಂಗಳು ಸರ್ಕಾರ ನಿಗದಿಪಡಿಸಿರುವ 200 ಯುನಿಟ್‌ ಒಳಗಿನ ವಿದ್ಯುತ್‌ ಉಚಿತ ಯೋಜನೆಯ ಲಾಭ ಸಿಗುತ್ತದೆ. ಇಲ್ಲದಿದ್ದರೆ ನೀವು ಮುಂದಿನ ತಿಂಗಳ ವಿದ್ಯುತ್‌ ಬಿಲ್‌ ಪಾವತಿಸಬೇಕಾಗುತ್ತದೆ.

ಹಾಗಾದರೆ ತಡ ಯಾಕೆ.. ಇಂದೆ ಅರ್ಜಿ ಸಲ್ಲಿಸಿ. ಆನ್‌ಲೈನ್‌ ಅರ್ಜಿ ಸಲ್ಲಿಸುವ ಮಾಹಿತಿಯನ್ನು ಈ ಲಿಂಕ್‌ ಮೂಲಕ ಓದಿ ಅರ್ಜಿ ಸಲ್ಲಿಸಿ.

Previous Post Next Post

Ads

Ads

نموذج الاتصال

×