Subscribe on YouTube
Join WhatsApp Group
Join Telegram Channel
ರಾಜ್ಯದ ಎಲ್ಲಾ ಹೆಣ್ಣುಮಕ್ಕಳಿಗೆ ವಿಶೇಷವಾಗಿ ಜಾರಿಗೆ ಬಂದಿರುವ ಯೋಜನೆ ಗೃಹಲಕ್ಷ್ಮಿ ಯೋಜನೆ (Gruha Lakshmi Scheme) ಆಗಿದೆ. ಈ ಯೋಜನೆಯ ಮೂಲಕ ಎಲ್ಲಾ ಹೆಣ್ಣುಮಕ್ಕಳ ಬ್ಯಾಂಕ್ ಖಾತೆಗೆ (Bank Account) ₹2000 ರೂಪಾಯಿ ಹಣ ಜಮೆ ಆಗುವುದಾಗಿ ಸರ್ಕಾರ ತಿಳಿಸಿತ್ತು.
ಹೆಣ್ಣುಮಕ್ಕಳು ಆರ್ಥಿಕವಾಗಿ ತೊಂದರೆ ಅನುಭವಿಸಬಾರದು ಎಂದು ಈ ಯೋಜನೆಯನ್ನು ತರಲಾಗಿದೆ. ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಕೆ ಸಹ ಈಗಾಗಲೇ ಶುರುವಾಗಿದೆ.
ರಾಜ್ಯದ ಸುಮಾರು 70 ಲಕ್ಷಕ್ಕಿಂತ ಹೆಚ್ಚು ಮಹಿಳೆಯರು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿ, ತಮ್ಮ ಖಾತೆಗೆ ಹಣ ಯಾವಾಗ ಬರುತ್ತದೆ ಎಂದು ಕಾದು ಕುಳಿತಿದ್ದಾರೆ. ಇನ್ನು ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿದ ಹಾಗೆ ಹೊಸ ಹೊಸ ಅಪ್ಡೇಟ್ ಗಳು ಹೊರಬರುತ್ತಲೇ ಇದೆ.
ಹೀಗಿರುವಾಗ ಅಪ್ಲಿಕೇಶನ್ ಹಾಕಿರುವ ಎಲ್ಲಾ ಹೆಂಗಸರ ಮನಸ್ಸಲ್ಲಿ ಈಗಿರುವ ಒಂದೇ ಪ್ರಶ್ನೆ ಗೃಹಲಕ್ಷ್ಮಿ ಯೋಜನೆಯ ಹಣ ತಮ್ಮ ಬ್ಯಾಂಕ್ ಅಕೌಂಟ್ ಗೆ ಬರುವುದು ಯಾವಾಗ ಎಂದು..
ಮನೆಯನ್ನು ನಡೆಸಿಕೊಂಡು ಹೋಗುವ ಗೃಹಲಕ್ಷ್ಮಿಯರಿಗಾಗಿ ಈ ಯೋಜನೆಯನ್ನು ಜಾರಿಗೆ ತರಲಾಗಿದ್ದು, ಅವರ ಖಾತೆಗೆ ಪ್ರತಿ ತಿಂಗಳು ₹2000 ರೂಪಾಯಿ ಜಮೆ ಮಾಡಿ ಆರ್ಥಿಕವಾಗಿ ಸಹಾಯ ಮಾಡುವ ಭರವಸೆಯನ್ನು ಸರ್ಕಾರ ನೀಡಿತ್ತು.
Subscribe on YouTube
Join WhatsApp Group
Join Telegram Channel
ಹಾಗೆಯೇ ಮಹಿಳೆಯರಿಗೆ ತೊಂದರೆ ಆಗದ ಹಾಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ ನಡೆಯಬೇಕು ಎಂದು ಸುಲಭ ವಿಧಾನವನ್ನು ತಿಳಿಸಲಾಗಿತ್ತು. ಈಗ ಸಾಕಷ್ಟು ಮಹಿಳೆಯರು ಅರ್ಜಿ ಸಲ್ಲಿಸುತ್ತಿದ್ದಾರೆ.
ಇವರಿಗೆಲ್ಲಾ ಸ್ವಾತಂತ್ರ್ಯ ದಿನಾಚರಣೆಯ ಸಮಯಕ್ಕೆ ಅಂದರೆ, ಆಗಸ್ಟ್ 15ರ ವೇಳೆಗೆ ಗೃಹಲಕ್ಷ್ಮಿ ಯೋಜನೆಯ ಹಣವನ್ನು ನೀಡುವುದಕ್ಕೆ ಸರ್ಕಾರ ನಿರ್ಧಾರ ಮಾಡಿ, ಅದಕ್ಕಾಗಿ ಸಿದ್ಧತೆಗಳನ್ನು ನಡೆಸುತ್ತಿದೆ. ಇನ್ನು ಖಾತೆಗೆ ಯಾವಾಗ ಹಣ ಬರುತ್ತದೆ ಎಂದು ಹೇಳುವುದಾದ್ರೆ ದಿನಾಂಕ ಆಗಸ್ಟ್ 16, 17 ನೇ ತಾರೀಖು ಜಮಾ ಆಗಬಹುದು. ಜುಲೈ 21ರಂದು ಸಿಎಂ ಅವರಿಂದ ಈ ಯೋಜನೆಗೆ ಚಾಲನೆ ಸಿಕ್ಕಿದ್ದು, ರಾಜ್ಯದ 12.8 ಮಿಲಿಯನ್ ಕುಟುಂಬದ ಗೃಹಲಕ್ಷ್ಮಿಯರಿಗೆ ಈ ಲಾಭ ಸಿಗುತ್ತದೆ.
ಗೃಹಲಕ್ಷ್ಮೀ ಯೋಜನೆಯ ಲಾಭವನ್ನು ಬಿಪಿಎಲ್ ಕಾರ್ಡ್, ಎಪಿಎಲ್ ಕಾರ್ಡ್ ಹಾಗೂ ಅಂತ್ಯೋದಯ ಕಾರ್ಡ್ ಇರುವ ಯಾವ ಮಹಿಳೆ ಆದರೂ ಪಡೆಯಬಹುರದು. ಆದರೆ ತೆರಿಗೆ ಮತ್ತು GST ಕಟ್ಟುವ ಕುಟುಂಬಕ್ಕೆ ಈ ಯೋಜನೆ ಫಲ ಸಿಗುವುದಿಲ್ಲ.
ಒಟ್ಟಿನಲ್ಲಿ ಗೃಹಲಕ್ಷ್ಮಿ ಯೋಜನೆಯ ಫಲ ನಿಮ್ಮ ಕೈಗೆ ಬರಲು ಸ್ವಲ್ಪ ಸಮಯ ಅಷ್ಟೇ ಬಾಕಿ ಉಳಿದಿದೆ. ಒಂದು ವೇಳೆ ನೀವಿನ್ನು ಗೃಹಲಕ್ಷ್ಮಿ ಯೋಜನೆಗೆ ಆರ್ಜಿ ಸಲ್ಲಿಸಿಲ್ಲ ಎಂದರೆ, ಇಂದೇ ಸಲ್ಲಿಸಿ.
ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸುವುದಕ್ಕಿಂತ ಮೊದಲು ನೀವು ಈ 8147500500 ನಂಬರ್ ಗೆ ನಿಮ್ಮ ರೇಷನ್ ಕಾರ್ಡ್ ನಂಬರ್ ಅನ್ನು SMS ಮಾಡಿ, ಈ ರೇಷನ್ ಕಾರ್ಡ್ ನಿಮ್ಮ ಆಧಾರ್ ಕಾರ್ಡ್ ಗೆ ಲಿಂಕ್ ಆಗಿರಬೇಕು.
Subscribe on YouTube
Join WhatsApp Group
Join Telegram Channel
ಈಗ ನಿಮ್ಮ ಮೊಬೈಲ್ ಗೆ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಬೇಕಾದ ದಿನಾಂಕ ಮತ್ತು ಸ್ಥಳದ ಮಾಹಿತಿ SMS ಮೂಲಕ ಬರುತ್ತದೆ. ಆ ಸ್ಥಳಕ್ಕೆ ಹೋಗಿ, ನೀವು ಅರ್ಜಿ ಸಲ್ಲಿಸಬಹುದು.
ಅಲ್ಲದೆ ಮೆಸೇಜ್ ಬಂದಿಲ್ಲ ಎಂದು ತಲೆಕೆಡಿಸಿಕೊಳ್ಳಬೇಕಾಗಿಲ್ಲ, ಸಂದೇಶ ಬರದೇ ಇದ್ದರು ಸಹ ಹೋಗಿ ಅರ್ಜಿ ಸಲ್ಲಿಸಬಹುದು, ಎಂಬ ಹೊಸ ಸೂಚನೆ ನೀಡಲಾಗಿದೆ. ಆದ್ದರಿಂದ ಯಾವುದೇ ಗೊದಲ ಇಲ್ಲದೆ ನೀವು ಅರ್ಜಿ ಸಲ್ಲಿಸಬಹುದು.
ಗ್ರಾಮ್ ಒನ್, ಕರ್ನಾಟಕ ಒನ್ ಅಥವಾ ಬಾಪೂಜಿ ಕೇಂದ್ರದಲ್ಲಿ ಅರ್ಜಿ ಸಲ್ಲಿಸಬಹುದು. ಆಗಸ್ಟ್ 17ರಂದು ಈ ಯೋಜನೆಯ ಫಲ ಪಡೆಯಬಹುದು.