ಹಲೋ ಸ್ನೇಹಿತರೇ ನಮಸ್ಕಾರ, ತೆರಿಗೆ ಎಂದರೆ ಸರ್ಕಾರದ ಆರ್ಥಿಕ ವ್ಯವಸ್ಥೆಯ ಒಂದು ದೊಡ್ಡ ಭಾಗವಾಗಿದೆ. ತೆರಿಗೆಯು ಒಂದು ಸರ್ಕಾರ ಅಥವಾ ಅದರ ಕಾರ್ಯಾತ್ಮಕ ಸಮಾನವಾದ ಸಂಸ್ಥೆಯು ತೆರಿಗೆದಾರನ ಮೇಲೆ ಹೇರುವ ಒಂದು ಶುಲ್ಕವಾಗಿದೆ ಎಂದು ಹೇಳಬಹುದು. ಈ ತೆರಿಗೆ ವ್ಯವಸ್ತೆಯು ರಾಜ್ಯದ ಜನರಿಗೆ ಒಂದು ಉತ್ತಮ ವ್ಯವಸ್ತೆಯಾಗಿದೆ ಅಂದರೆ ಕೆಳ ವರ್ಗದ ಬಂಡವಾಳದಾರಿಗೆ ಮತ್ತು ಮದ್ಯಮ ವರ್ಗದ ಜನರಿಗೆ ಅನುಕೂಲವಾಗುವಂತೆ ಈಗಿನ ಹೊಸ ತೆರಿಗೆ ಪದ್ದತಿಯನ್ನು ಜಾರಿಗೆ ತರಲಾಗಿದೆ ಮೊದಲು ಈ ತೆರಿಗೆ ಪದ್ದತಿಯನ್ನು 5 ಲಕ್ಷಕ್ಕೆ ನಿಗದಿಪಡಿಸಲಾಗಿತ್ತು ಆದರೆ ಜನರ ಅನುಕೂಲಕ್ಕಾಗಿ ಈಗ ಹೊಸ ತಿದ್ದುಪಡಿಯನ್ನು ಜಾರಿಗೆ ತರಲಾಗಿದೆ. ಈ ಹೊಸ ತಿದ್ದುಪಡಿ ಏನು ಈಗಿನ ಹೊಸ ನಿಯಮದ ಪ್ರಕಾರ ಸರ್ಕಾರಕ್ಕೆ ಎಷ್ಟು ತೆರಿಗೆ ಕಟ್ಟಬೇಕು ಎಂದು ತಿಳಿಯಲು ಈ ಲೇಖನವನ್ನು ಸಂಪೂರ್ಣವಾಗಿ ಓದಿ.
ನರೇಂದ್ರ ಮೋದಿ ಸರ್ಕಾರ ಮಧ್ಯಮ ವರ್ಗದ ಜನರಿಗೆ ಹಲವು ತೆರಿಗೆ ಪ್ರಯೋಜನಗಳನ್ನು ನೀಡಿದೆ. ವಾರ್ಷಿಕ ಆದಾಯ ಹೊಂದಿರುವ ಜನರಿಗೆ ಆದಾಯ ತೆರಿಗೆಯಿಂದ ವಿನಾಯಿತಿಯನ್ನು ಪ್ರಮಾಣ ಎಷ್ಟು ಎಂದು ಸಂಪೂರ್ಣವಾದ ಮಾಹಿತಿಯನ್ನು ಈ ಲೇಖನವು ಒಳಗೊಂಡಿದೆ.
style="display:block; text-align:center;" data-ad-layout="in-article" data-ad-format="fluid" data-ad-client="ca-pub-1277699272651823" data-ad-slot="4237842184">
ಹೊಸ ತೆರಿಗೆ ಪದ್ಧತಿ
ನರೇಂದ್ರ ಮೋದಿ ಸರ್ಕಾರ ಮಧ್ಯಮ ವರ್ಗದ ಜನರಿಗೆ ಹಲವು ತೆರಿಗೆ ಪ್ರಯೋಜನಗಳನ್ನು ನೀಡಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು. ಮೊದಲು 5 ಲಕ್ಷ ವಾರ್ಷಿಕ ಆದಾಯ ಹೊಂದಿರುವ ಜನರಿಗೆ ಆದಾಯ ತೆರಿಗೆಯಿಂದ ವಿನಾಯಿತಿಯನ್ನು ಇದು ಒಳಗೊಂಡಿತ್ತು ಆದರೆ ಈಗ ತೆರಿಗೆ ಆದಾಯದ ಪ್ರಮಾಣದ ಬದಲಾವಣೆ ಮಾಡಲಾಗಿದೆ ಎಂದು ತಿಳಿಸಲಾಗಿದೆ.
ಹೊಸ ತೆರಿಗೆ ಪದ್ದತಿಯು ವಾರ್ಷಿಕ ಆದಾಯದ ಮಿತಿಯು 5 ರಿಂದ 7 ಲಕ್ಷಕ್ಕೆ ಕ್ಕೆ ಏರಿಕೆ ಮಾಡಲಾಗಿದೆ ಅಂದರೆ ವಾರ್ಷಿಕ ಆದಾಯ 7 ಲಕ್ಷ ಇದ್ದರೆ ತೆರಿಗೆ ಕಟ್ಟುವ ಅಗತ್ಯವಿಲ್ಲ ಎಂದು ನಿರ್ಮಲಾ ಸೀತಾರಾಮನ್ ರವರು ತಿಳಿಸಿದ್ದಾರೆ.
ಸೀತಾರಾಮನ್ ಮಾತನಾಡಿ, ಸರ್ಕಾರವು ಸಮಾಜದ ಪ್ರತಿಯೊಬ್ಬ ವ್ಯಕ್ತಿಯನ್ನು ತನ್ನೊಂದಿಗೆ ಕರೆದೊಯ್ಯುತ್ತಿದೆ. 2023-24ರ ಕೇಂದ್ರ ಬಜೆಟ್‌ನಲ್ಲಿ ರೂ 7 ಲಕ್ಷದವರೆಗೆ ಆದಾಯ ತೆರಿಗೆ ವಿನಾಯಿತಿ ನೀಡಲು ನಿರ್ಧರಿಸಿದಾಗ, ಕೆಲವು ವಿಭಾಗಗಳಲ್ಲಿ ಅನುಮಾನಗಳು ಹುಟ್ಟಿಕೊಂಡವು. 7 ಲಕ್ಷಕ್ಕಿಂತ ಸ್ವಲ್ಪ ಹೆಚ್ಚು ಆದಾಯ ಹೊಂದಿರುವವರ ಗತಿಯೇನು ಎಂಬ ಪ್ರಶ್ನೆ ಮೂಡಿತ್ತು. ಆ ಸಂದರ್ಭದಲ್ಲಿ ಪ್ರತಿ ಹೆಚ್ಚುವರಿ ರೂ 1 ಕ್ಕೆ ನೀವು ಯಾವ ಮಟ್ಟದಲ್ಲಿ ತೆರಿಗೆ ಪಾವತಿಸುತ್ತೀರಿ ಎಂಬುದನ್ನು ಕಂಡುಹಿಡಿಯಲು ನಾವು ತಂಡವಾಗಿ ಕುಳಿತುಕೊಳ್ಳಲು ಯೋಚಿಸಿದ್ದೇವೆ ಎಂದು ಹಣಕಾಸು ಸಚಿವರು ಹೇಳಿದರು. ಉದಾಹರಣೆಗೆ 7.27 ಲಕ್ಷಕ್ಕೆ, ಈಗ ನೀವು ಯಾವುದೇ ತೆರಿಗೆಯನ್ನು ಪಾವತಿಸುವುದಿಲ್ಲ. ನಿಮ್ಮ ಆದಾಯ ಇದಕ್ಕಿಂತ ಹೆಚ್ಚಿದ್ದರೆ ಮಾತ್ರ ನೀವು ತೆರಿಗೆ ಪಾವತಿಸುತ್ತೀರಿ. ಎಂದು ಸೀತಾರಾಮನ್ ತಿಳಿಸಿದ್ದಾರೆ.