ಹಲೋ ಸ್ನೇಹಿತರೇ, ನಿಮಗೆಲ್ಲರಿಗೂ ಸ್ವಾಗತ. ನಾವಿಂದು ಈ ಲೇಖನದಲ್ಲಿ ಫ್ರೀ ಬಸ್ ದುರುಪಯೋಗದ ಬಗ್ಗೆ ವಿವರಿಸಿದ್ದೇವೆ. ರಾಜ್ಯದಲ್ಲಿ ಈ ಯೋಜನೆಯನ್ನು ಜಾರಿ ಮಾಡಲಾಗಿದೆ ಆದರೆ ಈ ಅನೇಕರು ಇದನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ. ಹಾಗದರೆ ಅದು ಯಾರು? ಈ ಯೋಜನೆಯ ದುರುಪಯೋಗದಲ್ಲಿ ನಿಮ್ಮ ಹಣವು ಇದೀಯಾ ಎಂದು ತಿಳಿದುಕೊಳ್ಳಲು ಈ ಲೇಖನವನ್ನು ಪೂರ್ತಿಯಾಗಿ ಓದಿ.
ರಾಜ್ಯದ ಪಂಚ ಗ್ಯಾರಂಟಿಗಳ ಅನುಷ್ಠಾನದ ಬಗ್ಗೆ ಸರ್ಕಾರ ತಲೆ ಕೆಡಿಸಿಕೊಂಡಿದೆ, ಅದರಲ್ಲಿಯು ಈಗ ಸಧ್ಯಕ್ಕೆ ಜಾರಿಯಾಗಿರುವ ಯೋಜನೆ ಯಾವ ರೀತಿ ನಡೆಯುತ್ತಿದೆ ಎಂದು ಪರಿಶೀಲನೆಗೆ ಕಾಂಗ್ರೆಸ್ ಸರ್ಕಾರ ಇದೀಗ ಮುಂದಾಗಿದೆ. ಹಾಗದರೆ ನಾವು ಮುಂದೆ ಹೇಳುವ ವಿಷಯವು ಕೂಡ ಅದೇ ಆಗಿದೆ. ಅದು ಏನು ಎಂದು ನೀವು ಈ ಲೇಖನದ ಮೂಲಕ ತಿಳಿದು ಕೊಳ್ಳಬಹುದಾಗಿದೆ.
ಪಂಚ ಗ್ಯಾರಂಟಿಗಳ ಪೈಕಿ ಫಲನುಭವಿಗಳಿಗೆ ನೇರವಾಗಿ ಸಧ್ಯಕ್ಕೆ ಸಿಗುತ್ತಿರುವ ಗ್ಯಾರಂಟಿ ಎಂದರೆ ಅದುವೇ ಶಕ್ತಿ ಯೋಜನೆ. ಅಂದರೆ ರಾಜ್ಯಾದ್ಯಂತ ಮಹಿಳೆಯರು ಉಚಿತವಾಗಿ ಸಾರಿಗೆ ಬಸ್‌ಗಳಲ್ಲಿ ಸಂಚಾರವನ್ನು ಮಾಡುವುದೇ ಆಗಿದೆ. ಹಾಗದರೆ ಯಾಕೆ ಈಗ ಸುದ್ದಿ ಆಗಿದೆ ಈ ಶಕ್ತಿ ಯೋಜನೆ ಎಂದು ನೋಡುವುದಾದರೆ, ನಂಬರ್‌ಗಳಲ್ಲಿ ಗೋಲ್ಮಲ್ ಮಾಡಲಾಗುತ್ತಿದೆ ಎನ್ನುವ ಗಂಭೀರ ಆರೋಪದಿಂದ ಎನ್ನುವುದು ಸ್ಪಷ್ಟವಾಗಿದೆ.
ಹಾಗದ್ರೆ ಯಾರು ಈ ಗೋಲ್ಮಲ್ ಮಾಡುವವರು ಎಂದರೆ ಅದುವೇ ಸಾರಿಗೆ ಸಿಬ್ಬಂದಿ, ಹೌದು ಸಾರಿಗೆ ಸಿಬ್ಬಂದಿಯೇ ಇಲ್ಲಿ ನಂಬರ್‌ಗಳಲ್ಲಿ ಗೋಲ್ಮಲ್ ಮಾಡುತ್ತಿದ್ದಾರೆ. ಈ ಕೆಲಸದ ಮೂಲಕ ಸರ್ಕಾರದ ಕಣ್ಣಿಗೆ ಮಣ್ಣೆರಚುವ ಕೆಲಸವನ್ನು ಮಾಡುತ್ತಿದ್ದಾರೆ ಎಂಬ ಸುದ್ದಿ ಇದೀಗ ರಾಜ್ಯಾದ್ಯಂತ ಹಾರಿದಾಡುತ್ತಿದೆ. ಈ ಎಲ್ಲಾದರ ಮೂಲಕ ʼಶಕ್ತಿʼ ಯೋಜನೆಯನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ ಎನ್ನುವ ಗೊಂದಲ ಜನ ಸಾಮಾನ್ಯರಲ್ಲಿ ಹಾಗೂ ಸರ್ಕಾರಕ್ಕೆ ಹೊಂದಿದೆ.
ಸಾರಿಗೆ ಸಿಬ್ಬಂದಿ ಆಧಿಕಾರಿಗಳ ಅಂತರಿಕ ಸುತ್ತೋಲೆಯನ್ನು ಹೊರಡಿಸಲಾಗಿದ್ದು ಸಿಬ್ಬಂದಿಗಳಿಗೆ ಹೆಚ್ಚಿನ ಟಿಕೆಟ್ ಅನ್ನು ನೀಡಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸೂಚಿಸಿದ್ದಾರೆ. ಈ ಒಂದು ಸುತ್ತೋಲೆ ಇಂದಲೇ ಬಂದಿರುವ ಅನುಮಾನ ಹೆಚ್ಚಿನ ಟಿಕೆಟ್ ಅನ್ನು ಅಂದ್ರೆ ಪ್ರಯಾಣ ಮಾಡಿದವರ ಸಂಖ್ಯೆಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಟಿಕೆಟ್ ಅನ್ನು ನೀಡುವುದು. ಈ ಮೂಲಕ ರಾಜ್ಯದಲ್ಲಿ ಸರ್ಕಾರ ಹಾಗೂ ಜನರಿಗೆ ಮೋಸ ಮಾಡಿತ್ತಿದ್ದಾರೆ.
ಅಂದರೆ ಹೋಗಿರುವುದು 10 ಜನ ಎಂದರೆ 15 ಜನ ಪ್ರಯಾಣಿಸಿದ್ದಾರೆ ಎಂದು ಟಿಕೆಟ್ ನೀಡುವ ಮೂಲಕ ಸರ್ಕಾರಕ್ಕೆ ಮೋಸ ಮಾಡುತ್ತಿದ್ದಾರ ಎನ್ನುವ ಗೊಂದಲ ಉಂಟಾಗಿದೆ. ನೀವು ಕೂಡ ಉಚಿತ ಬಸ್ ಪ್ರಯಾಣವನ್ನು ಮಾಡಿದವರಾಗಿದ್ದರೆ ಅಥವಾ ನಿಮಗೂ ಸರ್ಕಾರಿ ಕಂಡಕ್ಟರ್ ಹಾಗೂ ಸಿಬ್ಬಂದಿಗಳು ಮೋಸ ಮಾಡಿದ್ದರೆ ಎನ್ನಿಸಿದರೆ ನಮಗೆ ಕಮೆಂಟ್ ಮೂಲಕ ತಿಳಿಸಿ.
Beeru
ReplyDelete