ವಿಷ್ಣುದಾದ ತೊಡುತ್ತಿದ್ದ ‘ಕಡಗ’ ಈಗ ಯಾರ ಬಳಿ ಇದೆ ಗೊತ್ತಾ? ಇಲ್ಲಿದೆ ಅಸಲಿ ವಿಚಾರ


ಸಾಹಸಸಿಂಹ ಡಾ.ವಿಷ್ಣುವರ್ಧನ್ ಅವರ ಟ್ರೇಡ್ ಮಾರ್ಕ್ ‘ಕೈ ಕಡಗ’ ಗೊತ್ತಿಲ್ಲದ ಕನ್ನಡಿಗರಾರಿದ್ದಾರೆ ಹೇಳಿ? ಅಷ್ಟು ಜನಪ್ರಿಯವಾಗಿದೆ ಆ ಕಡಗ.. ಡಾ.ವಿಷ್ಣು ಅವರು ಕಡಗವನ್ನ ತಿರುಗಿಸುತ್ತಾ ವಿಶಿಷ್ಟ ಶೈಲಿಯಲ್ಲಿ ಹೆಜ್ಜೆಯಿಡುತ್ತಾ ನಡೆದು ಬಂದ್ರೆ ಎಂತವರೂ ಹುಚ್ಚೆದ್ದು ಕುಣಿಯುತ್ತಿದ್ದರು.. ವಿಷ್ಣು ‘ಕಡಗ’ ಅಭಿಮಾನಿಗಳ ಪಾಲಿಗಂತೂ ಅದು ಸಂಸ್ಕೃತಿಯೇ ಆಗಿಬಿಟ್ಟಿದೆ. ಪ್ರತಿ ದಾದಾರ ಅಭಿಮಾನಿಗಳು ಕೂಡ ಅದೇ ರೀತಿಯ ಕಡಗವನ್ನು ಕೊಂಡು ಧರಿಸುತ್ತಾರೆ.. ಆದರೆ ವಿಷ್ಣು ತೊಡುತ್ತಿದ್ದ ಆ ಕಡಗ ಅವರು ಹೋದಮೇಲೆ ಈಗ ಎಲ್ಲಿದೆ, ಅದನ್ನು ಯಾರು ಹಾಕಿಕೊಂಡಿದ್ದಾರೆ? ವಿಷ್ಣು ಅಂತ್ಯಕ್ರಿಯೆಯಲ್ಲಿ ಕಡಗವನ್ನು ಕೂಡ ಭಸ್ಮ ಮಾಡಲಾಯಿತಾ? ಹೀಗೆ ನೂರಾರು ಪ್ರಶ್ನೆಗಳು ‘ಯಜಮಾನ’ರ ಆರಾಧಕರಲ್ಲಿ ಮೂಡಿದೆ.. ಈ ನಿಟ್ಟಿನಲ್ಲಿ ಅಂಥಾ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಇಲ್ಲಿದೆ.

ವಿಷ್ಣು ಕೈಗೆ ‘ಕಡಗ’ ಬಂದಿದ್ದು:

ಅಂದ್ಹಾಗೆ ಅವರ ಕೈಗೆ ಕಡಗ ಬಂದಿದ್ದು ಯಾವಾಗ ಗೊತ್ತಾ? 1980ರಲ್ಲಿ ತೆರೆಕಂಡ ಸಿಂಹಜೋಡಿ ಚಿತ್ರದ ಮೂಲಕ. ಬೀದರ್ ನಲ್ಲಿರೋ ಗುರುದ್ವಾರವೊಂದರಲ್ಲಿ ಸಿಖ್ ಗುರುವೊಬ್ಬರು ವಿಷ್ಣುಗೆ ಆ ಕಡಗ ತೊಡಿಸಿದ್ದರು. ಅಂದಿನಿಂದ ಇಂದಿನ ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆ ನಡೆಯುವ ವರೆಗೂ ‘ಕಡಗ’ ಕೋಟಿಗೊಬ್ಬನ ಕೈಯಲ್ಲೇ ಉಳಿದುಕೊಂಡಿತ್ತು.

ಈಗ ಎಲ್ಲಿದೆ ಗೊತ್ತಾ ಹೃದಯವಂತನ ಕಡಗ:

ವಿಷ್ಣುವರ್ಧನ್ ನಿಧನದ ಬಳಿಕ ಅವರ ಕಡಗವನ್ನು ತಮ್ಮದಾಗಿಸಿಕೊಳ್ಳಲು ತುಂಬಾ ಜನ ಪ್ರಯತ್ನ ಪಟ್ಟಿದ್ದರು.. ಆದರೆ, ವಿಷ್ಣು ಕುಟುಂಬಸ್ಥರು ಕಡಗವನ್ನು ಯಾರಿಗೂ ಕೊಟ್ಟಿರಲಿಲ್ಲ.. ಅಷ್ಟೇ ಯಾಕೆ ಸ್ವತಃ ಅಳಿಯ ಅನಿರುದ್ ಅವರಿಗೂ ವಿಷ್ಣು ಕಡಗವನ್ನು ಕೊಡುವುದಕ್ಕೆ ಭಾರತೀ ವಿಷ್ಣುವರ್ಧನ್ ಇಷ್ಟಪಡಲಿಲ್ಲ.. ಆದರೆ, ವಿಷ್ಣು ಕಡಗ ಈಗ ಸುದೀಪ್ ಕೈನಲ್ಲಿದೆ, ದರ್ಶನ್ ಕೈನಲ್ಲಿದೆ, ಅಳಿಯ ಅನಿರುದ್ದ್ ಹಾಕಿಕೊಂಡಿದ್ದಾರೆ ಎಂಬಂತ ನಾನಾ ಗಾಸಿಪ್ ಗಳು ಸಾಮಾಜಿಕ ಜಲತಾಣಗಳಲ್ಲಿ ಹರಿದಾಡುತ್ತಿರುತ್ತಲೇ ಇರುತ್ತವೆ., ಆದರೆ ಈ ಎಲ್ಲಾ ಸುದ್ದಿಗಳು ಶುದ್ಧ ಸುಳ್ಳು ಯಾಕೆಂದ್ರೆ ವಿಷ್ಣು ಕಡಗ ಇವರ‍್ಯಾರ ಬಳಿಯೂ ಇಲ್ಲ.

ವಿಷ್ಣು ಪುತ್ರಿ ಬಳಿಯಿದೆ ಆ ಅಮೂಲ್ಯ ‘ಕಡಗ’:

ಸಾಹಸಸಿಂಹ ಕಡಗ ಅವರು ನಿಧಾನ ಹೊಂದಿದಾಗಿನಿಂದಲೂ ವಿಷ್ಣು ಅವರ ಮನೆಯಲ್ಲಿಯೇ ಇದೆ.. ಸಿರಿವಂತನ ಪ್ರೀತಿಯ ಪುತ್ರಿ ಕೀರ್ತಿ ವಿಷ್ಣುವರ್ಧನ್ ಅವರು ಅಪ್ಪನ ಕೈ ಕಡಗವನ್ನು ಜೋಪಾನವಾಗಿ ಕಾಪಾಟ್ಟುಕೊಂಡಿದ್ದಾರೆ.. ಕೇವಲ ಕಡಗವನ್ನ ಮಾತ್ರವಲ್ಲದೆ ಯಜಮಾನರು ಧರಿಸುತ್ತಿದ್ದ ಉಡುಗೆ, ಆಭರಣ, ವಾಚುಗಳು, ಕೊರಳ ಮಣಿ, ತಲೆಗೆ ಧರಿಸುತ್ತಿದ್ದ ಟರ್ಬನ್ ಮುಂತಾದ ವಸ್ತುಗಳನ್ನೂ ಕೀರ್ತಿ ಜೋಪಾನ ಮಾಡುತ್ತಿದ್ದಾರೆ..

Previous Post Next Post

Ads

Ads

نموذج الاتصال

×