ಬಂತು ನೋಡಿ ಗೃಹಲಕ್ಷ್ಮಿ ಯೋಜನೆಯ ಅರ್ಜಿ ಫಾರಂ! ಈಗಲೇ ಎಲ್ಲರೂ ಅರ್ಜಿ ಫಾರಂ ಡೌನ್ಲೋಡ್ ಡೌನ್ಲೋಡ್ ಮಾಡಿಟ್ಟುಕೊಳ್ಳಿ ಇಲ್ಲಿದೆ ಲಿಂಕ್ !

ಕರ್ನಾಟಕ ಗೃಹಲಕ್ಸ್ಮಿ ಯೋಜನೆ 2023 ಅರ್ಜಿ ಫಾರಂ ಇಲ್ಲಿದೆ!

ರಾಜ್ಯದ ನೂತನ ಸಿಎಂ ಸಿದ್ದರಾಮಯ್ಯ ನೆನ್ನೆ ಅಷ್ಟೇ ಗೃಹಲಕ್ಷ್ಮಿ ಯೋಜನೆಯ ಕುರಿತು ಅಧಿಕೃತ ಆದೇಶ ಹೊರಡಿಸಿದ್ದು ಕರ್ನಾಟಕದ ಕಾಯಂ ನಿವಾಸಿಯಾಗಿರುವ ಎಲ್ಲಾ ರಾಜ್ಯದ ಮಹಿಳೆಯರಿಗೂ ಕೂಡ ಗೃಹಲಕ್ಷ್ಮಿ ಯೋಜನೆಯ ಅಡಿಯಲ್ಲಿ  2,000 ಹಣವನ್ನು ವರ್ಗಾವಣೆ ಮಾಡುವುದಾಗಿ  ತಿಳಿಸಿದ್ದಾರೆ. ಈ ಕುರಿತು ಇದೀಗ ಗುರುಲಕ್ಷ್ಮಿ ಯೋಜನೆಯ ಅರ್ಜಿ ಫಾರಂ ಬಿಡುಗಡೆ ಮಾಡಿದ್ದು ಅರ್ಜಿ ಫಾರಂ ಅನ್ನು ಡೌನ್ಲೋಡ್ ಮಾಡುವುದು ಹೇಗೆ ಹಾಗೂ ಬೇಕಾಗುವ ದಾಖಲಾತಿಗಳ ಕುರಿತು ಈ ಲೇಖನದಲ್ಲಿ ಮಾಹಿತಿ ತಿಳಿಸಲಿದ್ದೇವೆ.

ಬಂತು ನೋಡಿ ಗೃಹಲಕ್ಷ್ಮಿ ಯೋಜನೆಯ ಅರ್ಜಿ ಫಾರಂ!

ನೂತನ ಸಿಎಂ ಸಿದ್ದರಾಮಯ್ಯ ಈಗಾಗಲೇ ಗೃಹಲಕ್ಷ್ಮಿ ಯೋಜನೆಯ ಕುರಿತು ಅಧಿಕೃತ ಆದೇಶ ಹೊರಡಿಸಿದ್ದು ಗೃಹಿಣಿಯೇ ಅರ್ಜಿ ಸಲ್ಲಿಸುವ ಮುನ್ನ ಮನೆಯ ಯಜಮಾನಿ ಯಾರು ಎಂದು ನಿರ್ಧರಿಸಿ ಸರ್ಕಾರಕ್ಕೆ ತಿಳಿಸಬೇಕೆಂದು ಹೇಳಿದ್ದಾರೆ. ಹಾಗಾಗಿ ಒಂದು ಮನೆಯಲ್ಲಿ  ಎಷ್ಟು ಜನವಾದರೂ ಇರಲಿ ಹಾಗೂ ಅವರ ಬಳಿ ಎಷ್ಟೇ ರೇಷನ್ ಕಾರ್ಡ್ ಗಳಿದ್ದರೂ ಕೂಡ  ಯಾರು ಮನೆಯ ಯಜಮಾನಿಯಾಗುತ್ತಾರೆ ಎಂದು ಅವರೇ ನಿರ್ಧರಿಸಿ ಸರ್ಕಾರಕ್ಕೆ ಅರ್ಜಿ ಸಲ್ಲಿಸಬೇಕೆಂದು ತಿಳಿಸಿದ್ದಾರೆ.

ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಯಾವುದೇ ಬಿಪಿಎಲ್ ಹಾಗೂ ಎಪಿಎಲ್ ಕಾರ್ಡಿನ ಶರ್ಟುಗಳು ಇರುವುದಿಲ್ಲ ನಿಮ್ಮ ಬಳಿ ಬಿಪಿಎಲ್ ಅಥವಾ ಎಪಿಎಲ್ ಯಾವುದೇ ಕಾರ್ಡಿದ್ದರೂ ಕೂಡ ನೀವು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಬಹುದಾಗಿದೆ.

ಈ ಯೋಜನೆಗೆ ಸದ್ಯ ಅರ್ಜಿ ಫಾರಂ ಅನ್ನು ಬಿಡುಗಡೆ ಮಾಡಿದ್ದು ಅರ್ಜಿ ಫಾರಂ ಡೌನ್ಲೋಡ್ ಮಾಡಿಕೊಂಡು ನೀವು ಅದಕ್ಕೆ ಬೇಕಾಗಿರುವ ಎಲ್ಲ ದಾಖಲಾತಿಗಳನ್ನು ಹೊಂದಿಸಿಕೊಂಡು,  ಜೂನ್ 15ಕ್ಕೆ ಬಿಡುಗಡೆಯಾಗುವ ಅಧಿಕೃತ ವೆಬ್ಸೈಟ್ನಲ್ಲಿ ಅರ್ಜಿ ಫಾರಂ ಅನ್ನು ಸಲ್ಲಿಸಬೇಕು ಬಳಿಕ ನಿಮ್ಮ ಅರ್ಜಿಗಳನ್ನು ಪರಿಶೀಲನೆ ಮಾಡಲಾಗುತ್ತದೆ.

ಅರ್ಜಿ ಫಾರಂ ಅನ್ನು ಇಲ್ಲಿ ನೀಡಲಾಗಿದೆ: ಕ್ಲಿಕ್ ಮಾಡಿ ಅರ್ಜಿ ಡೌನ್ಲೋಡ್ ಮಾಡಿ

 ನೀವು ಅರ್ಜಿ ಫಾರಂ ಅನ್ನು ಡೌನ್ಲೋಡ್ ಮಾಡಿದ ಬಳಿಕ ಅದಕ್ಕೆ ಅಗತ್ಯವಿರುವ ದಾಖಲಾತಿಗಳನ್ನು ಒದಗಿಸಬೇಕಾಗುತ್ತದೆ.

 ಅಗತ್ಯವಿರುವ ದಾಖಲಾತಿಗಳು!

  1.  ಆಧಾರ್ ಕಾರ್ಡ್
  2.  ಬಿಪಿಎಲ್ ಅಥವಾ ಎಪಿಎಲ್ ಪಡಿತರ ಚೀಟಿ
  3.  ಗೃಹಿಣಿಯ ಬ್ಯಾಂಕ್ ಖಾತೆಯ ವಿವರಗಳು
  4.  ಆದಾಯ ಮತ್ತು ಜಾತಿ ಪ್ರಮಾಣ ಪತ್ರ
  1. ಯೋಜನೆಯ ಹೆಸರುಕರ್ನಾಟಕ ಗೃಹ ಲಕ್ಷ್ಮಿ ಯೋಜನೆ
    ಮೂಲಕ ಘೋಷಿಸಲಾಗಿದೆಕಾಂಗ್ರೆಸ್ ಪಕ್ಷ
    ರಾಜ್ಯಕರ್ನಾಟಕ
    ಫಲಾನುಭವಿಕರ್ನಾಟಕ ರಾಜ್ಯದ ಮಹಿಳೆಯರು
    ಉದ್ದೇಶತಮ್ಮ ಕುಟುಂಬದ ಮುಖ್ಯಸ್ಥರಾಗಿರುವ ರಾಜ್ಯದ ಮಹಿಳೆಯರಿಗೆ ಹಣಕಾಸಿನ ನೆರವು ನೀಡುವುದು.
    ಲಾಭತಿಂಗಳಿಗೆ 2,000 ರೂ
    ಅಧಿಕೃತ ಜಾಲತಾಣ

ಇಷ್ಟು ಅರ್ಹ ದಾಖಲಾತಿಗಳನ್ನು ಗೃಹಿಣಿಯ ಹೊಂದಿದ್ದಲ್ಲಿ ನೇರವಾಗಿ ಗೃಹಿಣಿಯು ಅರ್ಜಿ ಸಲ್ಲಿಸಬಹುದು ಅರ್ಜಿ ಸಲ್ಲಿಸುವ ಮುನ್ನ ತಮ್ಮ ಆಧಾರ್ ಕಾಡಿಗೆ ಬ್ಯಾಂಕ್ ಖಾತೆ ಕಡ್ಡಾಯವಾಗಿ ಲಿಂಕ್ ಆಗಿದಿಯಾ ಇಲ್ಲವಾ ಎಂಬುದನ್ನು ಪರಿಶೀಲಿಸಿಕೊಳ್ಳುವುದು ಸೂಕ್ತ ಏಕೆಂದರೆ ಗೃಹಲಕ್ಷ್ಮಿ ಯೋಜನೆಯ ಹಣವನ್ನು ನೇರವಾಗಿ ಗೃಹಿಣಿಯ ಆಧಾರ್ಕಾಡಿಯ ಲಿಂಕಾಗಿರುವ ಬ್ಯಾಂಕ್ ಖಾತೆಯ ಮುಖಾಂತರವೇ ಹಣವನ್ನು ವರ್ಗಾವಣೆ ಮಾಡುವ ಕಾರಣ ಗೃಹಿಣಿಯು ಕಡ್ಡಾಯವಾಗಿ ಆಧಾರ್ ಕಾರ್ಡ್ ಗೆ ಬ್ಯಾಂಕ್ ಖಾತೆಯನ್ನು ಲಿಂಕ್ ಮಾಡಿಸುವುದು ಸೂಕ್ತವಾಗಿದೆ.

ಅರ್ಜಿ ಫಾರಂ ಅನ್ನು ಡೌನ್ಲೋಡ್ ಮಾಡಿಕೊಂಡು ಅದಕ್ಕೆ ಅಗತ್ಯವಿರುವ ಎಲ್ಲ ದಾಖಲಾತಿಗಳನ್ನು ಒದಗಿಸಿ ಬಳಿಕ ಜೂನ್ 15ಕ್ಕೆ ಸರ್ಕಾರವು ಅಧಿಕೃತವಾಗಿ ವೆಬ್ಸೈಟ್ ಬಿಡುಗಡೆ ಮಾಡಲಿದೆ. ಈ ವೆಬ್ಸೈಟ್ನಲ್ಲಿ ಡೌನ್ಲೋಡ್ ಮಾಡಿಕೊಂಡ ಅರ್ಜಿಯನ್ನು ಭರ್ತಿ ಮಾಡಿ ಬಳಿಕ ಅಗತ್ಯವಿರುವ ದಾಖಲಾತಿಗಳೊಂದಿಗೆ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ.

ಅರ್ಜಿ ಸಲ್ಲಿಸಲು ಕೊನೆಯ ಅವಕಾಶ ಯಾವಾಗ!

ಗೃಹಿಣಿಯು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಜೂನ್ 15ರಿಂದ ಜುಲೈ 15 ರವರೆಗೆ ಮಾತ್ರವಷ್ಟೇ ಕಾಲಾವಕಾಶವನ್ನು ನೀಡಲಾಗಿರುತ್ತದೆ ಜುಲೈ 15ರ ಬಳಿಕ ಅರ್ಜಿಗಳನ್ನು ಪರಿಶೀಲಿಸಿ ಆಗಸ್ಟ್ ತಿಂಗಳಿನಿಂದ ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ ಗೃಹಿಣಿಯ ಬ್ಯಾಂಕ್ ಖಾತೆಗೆ ಹಣವನ್ನು ವರ್ಗಾವಣೆ ಮಾಡಲಾಗುತ್ತದೆ ಎಂದು ನೂತನ ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.

ಈ ಯೋಜನೆಯ ಅಡಿಯಲ್ಲಿ ಗೃಹಿಣೀಯರಿಗೆ ಪ್ರತಿ ತಿಂಗಳು 2000 ದಂತೆ ವರುಷಕ್ಕೆ 24,000 ಹಣವನ್ನು ಬ್ಯಾಂಕ್ ಖಾತೆಗೆ ನೇರವಾಗಿ ಉಚಿತವಾಗಿ ವರ್ಗಾವಣೆ ಮಾಡಲಾಗುತ್ತದೆ ಹಾಗಾಗಿ ಎಲ್ಲರೂ ಕೂಡ ಈ ಕೂಡಲೇ ಅರ್ಜಿ ಫಾರಂ ಡೌನ್ಲೋಡ್ ಮಾಡಿಕೊಂಡು ಅರ್ಹ ದಾಖಲಾತಿಗಳನ್ನು ಸಿದ್ಧಪಡಿಸಿಕೊಳ್ಳಿ.

ಲೇಖನವನ್ನು ಇಲ್ಲಿಯವರೆಗೆ ಓದಿದ್ದಕ್ಕೆ ಧನ್ಯವಾದಗಳು ಶುಭದಿನ!

Previous Post Next Post

Ads

Ads

نموذج الاتصال

×