ಬೆಳೆ ಹಾನಿ ಪರಿಹಾರ 2023-2024: ನಿಮ್ಮ ಖಾತೆಗೆ ಹಣ ಜಮಾ ಆಗಿದೆಯಾ? ಅರ್ಜಿಯನ್ನು ಸಲ್ಲಿಸುವುದು ಹೇಗೆ?

 ಬೆಳೆ ಹಾನಿ ಪರಿಹಾರ ಕರ್ನಾಟಕದ ರೈತರಿಗೆ ಹಿಂಗಾರು ಮುಂಗಾರು ಮತ್ತು ಬೇಸಿಗೆ ಅಲ್ಲಿ ಬೆಳೆಗಳ ಹಾನಿಯಾಗಿದ್ದಕ್ಕೆ ಆರ್ಥಿಕ ನೆರವಾಗಿ ಬೆಳೆಗಳಿಗೆ ಮಾಡಿಸಿದ ಬೆಳೆ ವಿಮೆ ಸಂಪೂರ್ಣ ನಿಮ್ಮ ಖಾತೆಗೆ ಜಮಾ ಆಗುತ್ತದೆ.

ಹೋದ ಸಲ ಮುಂಗಾರಿನ ಆರ್ಭಟಕ್ಕೆ ಹಾನಿಯಾಗಿರುವ ಬೆಳೆಗಳಿಗೆ ಬೆಳೆ ಪರಿಹಾರ ಇನ್ನಷ್ಟು ದಿನದಲ್ಲಿ ನಿಮ್ಮ ಖಾತೆಗೆ ನೇರವಾಗಿ ಹಣ ಜಮಾ ಆಗುತ್ತದೆ. ಬೆಳೆ ಪರಿಹಾರಕ್ಕೆ ನೀವು ಅರ್ಹತೆ ಹೊಂದಿದ್ದೀರೋ ಅಥವಾ ಇಲ್ಲ ಮತ್ತು ಬೆಳೆ ಪರಿಹಾರಕ್ಕೆ ಅರ್ಜಿ ಸಲ್ಲಿಸುವುದು ಹೇಗೆ ಮತ್ತು ಬೆಳೆಯ ಜಿಪಿಆರ್ಎಸ್ ಮಾಡುವುದು ಹೇಗೆ ಮತ್ತು ಬೆಳೆ ವಿಮೆ ಸ್ಟೇಟಸ್ ಚೆಕ್ ಮಾಡುವುದು ಮತ್ತು ಬೆಳೆ ಪರಿಹಾರ ಪಡೆಯಲು ಯಾವ ತಪ್ಪುಗಳನ್ನು ಮಾಡಬಾರದು ಎಂದು ತಿಳಿಯಲು ಈ ಸಂಪೂರ್ಣ ಲೇಖವನ್ನು ಕೊನೆಯವರೆಗೂ ಓದಿ.


ಬೆಳೆ ಪರಿಹಾರಕ್ಕೆ ಅರ್ಜಿಯನ್ನು ಹೇಗೆ ಸಲ್ಲಿಸಬೇಕು?

ಅರ್ಜಿಯನ್ನು ಸಲ್ಲಿಸಲು ಒಂದಿಷ್ಟು ದಾಖಲೆಗಳು ಬೇಕಾಗುತ್ತವೆ ಕೆಳಗಿನಂತಿವೆ:

  • ಆಧಾರ್ ಕಾರ್ಡ್( ಜಮೀನಿನ ಮಾಲೀಕರು)
  • ಪಹಣಿ (RTC)
  • ಬ್ಯಾಂಕ್ ಪಾಸ್ ಬುಕ್

ಅರ್ಜಿ ಸಲ್ಲಿಸುವ ವಿಧಾನ:

ಮೇಲೆ ನೀಡಿರುವ ಎಲ್ಲಾ ದಾಖಲೆಗಳನ್ನು ನಿಮ್ಮ ಹಳ್ಳಿಯ ತಲಾಟೆ (Village Accountant) ಹತ್ತಿರ ಹೋಗಬೇಕು ಅಲ್ಲಿ ನಿಮ್ಮ ಎಲ್ಲಾ ದಾಖಲೆಗಳನ್ನು ನೀಡಿ online registration ಮಾಡಿಸಬೇಕು.

ಯಾವ ಕಾರಣಗಳಿಂದ ನಿಮ್ಮ ಬೆಳೆ ಪರಿಹಾರ ಜಮಾ ಆಗುವುದಿಲ್ಲ?

  1. ನಿಮ್ಮ ಹೊಲದ ಜಿಪಿಆರ್ಎಸ್ ಮಾಡದೆ ಹೋದಲ್ಲಿ ಬೆಳೆ ಪರಿಹಾರ ನಿಮ್ಮ ಖಾತೆಗೆ ಜಮಾ ಆಗುವುದಿಲ್ಲ.
  2. ನೀವು ಬೆಳೆ ವಿಮೆ ಮಾಡಿದ ಅದೇ ಬೆಳೆಯ ಜಿಪಿಆರ್ಎಸ್ ಮಾಡಿಸಬೇಕು. ನೀವು ಬೇರೆ ಬೆಳೆಯ ಜಿಪಿಆರ್ಎಸ್ ಮಾಡಿಸಿದಲ್ಲಿ ನಿಮಗೆ ಬೆಳೆ ಪರಿಹಾರ ನೀಡುವುದಿಲ್ಲ.
  3. ಮತ್ತು ನೀವು ಬೆಳೆಗಳನ್ನು ಬೆಳೆಯದೆ ಜಿಪಿಆರ್ಎಸ್ ಮಾಡಿದರೆ ನಿಮ್ಮ ಖಾತೆಗೆ ಯಾವುದೇ ಹಣ ನೀಡಲಾಗುವುದಿಲ್ಲ.
  4. ರೈತರೇ ನೀವು ಬೆಳೆ ಹಾನಿಯಾಗಿದೆ 2-3 ದಿನದಲ್ಲಿ ಬೆಳೆ ವಿಮೆ ಅಧಿಕಾರಿಗಳಿಗೆ ವರದಿಯನ್ನು ನೀಡಬೇಕು ತಡವಾದಲ್ಲಿ ಬೆಳೆ ಹಾನಿ ಪರಿಹಾರ ಸಿಗುವುದು ಕಷ್ಟವಾಗುತ್ತದೆ.

ಮೊಬೈಲ್ ನಲ್ಲಿ ಜಿಪಿಆರ್ಎಸ್ ಮಾಡುವುದು ಹೇಗೆ?

  • ಹೌದು ರೈತರೇ ಈಗ ನೀವು ನಿಮ್ಮ ಮೊಬೈಲ್ ನಿಂದಲೇ ನಿಮ್ಮ ಹೊಲದ ಜಿಪಿಆರ್ಎಸ್ ಮಾಡಬಹುದು ಅದಕ್ಕಾಗಿ ಕರ್ನಾಟಕ ಸರ್ಕಾರದಿಂದ ಒಂದು ಆಪ್ ಬಿಡುಗಡೆಯಾಗಿದೆ. ರೈತರಿಗೆ ಇದು ಒಂದು ಉತ್ತಮ ಮತ್ತು ಅನುಕೂಲವಾದ ಸಾಧನವಾಗಿದೆ. ಆಪಿನ ಹೆಸರು ಬೆಳೆ ದರ್ಶಕ 2022-2023.
  • ಮೇಲ್ ನೀಡಿದ ಹೆಸರನ್ನು ಗೂಗಲ್ ಪ್ಲೇ ಸ್ಟೋರ್ ನಲ್ಲಿ ಸರ್ಚ್ ಮಾಡಿ ಅದನ್ನು Install ಮಾಡಿಕೊಳ್ಳಿ.
  • ಆನಂತರ ಆಪ್ open ಮಾಡಿ ಆನಂತರ ಅಲ್ಲಿ ಮುಂಗಾರು ಮತ್ತು 2022-23 ಎಂದು ಆಯ್ಕೆ ಮಾಡಿ ಮುಂದೆ ಎಂದು ಕ್ಲಿಕ್ ಮಾಡಿ.
  • ಮುಂದಿನ ಪಾಠದಲ್ಲಿ ನಿಮ್ಮ ಆಧಾರ್ ಕಾರ್ಡ್ ಸ್ಕ್ಯಾನ್ ಮಾಡಬೇಕು, ಅಲ್ಲಿ ನೀಡಿದ QR code ಮೇಲೆ ಕ್ಲಿಕ್ ಮಾಡಿ ನಿಮ್ಮ ಆಧಾರ್ ಕಾರ್ಡ್ ಸ್ಕ್ಯಾನ್ ಮಾಡಿಕೊಳ್ಳಿ ನಂತರ ನಿಮ್ಮ ಮೊಬೈಲ್ ನಂಬರ್ ಹಾಕಿ ಕೆಳಗೆ ನೀಡಿರುವ ಸಕ್ರಿಯ button ಮೇಲೆ ಕ್ಲಿಕ್ ಮಾಡಿ ಆನಂತರ ಸರಿ ಮೇಲೆ ಕ್ಲಿಕ್ ಮಾಡಿ.
  • ಆನಂತರ ನಿಮ್ಮ ಮೊಬೈಲ್ ಸಂಖ್ಯೆಗೆ ಒಂದು OTP ಬರುತ್ತದೆ ಅದನ್ನು ಕೆಳಗಡೆ ಭರ್ತಿ ಮಾಡಿ ಸಲ್ಲಿಸಿ ಮೇಲೆ ಕ್ಲಿಕ್ ಮಾಡಿ.
  • ಆನಂತರ ಡೌನ್ಲೋಡ್ ಮಾಸ್ಟರ್ ವಿವರ ಮೇಲೆ ಕ್ಲಿಕ್ ಮಾಡಿ ಅದನ್ನು ಡೌನ್ಲೋಡ್ ಮಾಡಿಕೊಳ್ಳಿ.
  • ಅದೇ ಪುಟದಲ್ಲಿ ಡೌನ್ಲೋಡ್ ಪಹಣಿ ಮತ್ತು ಮಾಲೀಕರ ವಿವರ ಮೇಲೆ ಕ್ಲಿಕ್ ಮಾಡಿ, ಅಲ್ಲಿ ನೀಡಲಾದ ಎಲ್ಲಾ ಮಾಹಿತಿಯನ್ನು ನೀಡಿ ಮತ್ತು ನಿಮ್ಮ ಹೊಲವನ್ನು Map ನಲ್ಲಿ ಆಯ್ಕೆ ಮಾಡಬೇಕು.

ನಿಮ್ಮ ಬೆಳೆ ಹಾನಿ ಪರಿಹಾರ ಸ್ಟೇಟಸ್ ಚೆಕ್ ಮಾಡುವುದು ಹೇಗೆ?

ಇದರಿಂದ ನೀವು ಮಾಡಿದ ಜಿಪಿಆರ್ಎಸ್ ನಮ್ಮೂದನೆ ಮಾಡಿದಾರೋ ಇಲ್ಲವೋ ಎಂದು ತಿಳಿಯಬಹುದು ಮತ್ತು ನಿಮ್ಮ ಬೆಳೆ ಪರಿಹಾರ ಯಾವಾಗ ಜಮಾ ಆಗುತ್ತದೆ ಎಂದು ತಿಳಿಯಬಹುದು, ಈ ಕೆಳಗಿನಂತೆ ಮಾಡಿ.

  1. ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ:
    https://www.samrakshane.karnataka.gov.in/
  2. ಆ ಪುಟದಲ್ಲಿ 2022-23 ಎಂದು ಆಯ್ಕೆ ಮಾಡಿ ಮತ್ತು ಋತು ಆಯ್ಕೆಯಲ್ಲಿ ಖರೀಫ್ (kharif) ಎಂದು ಆಯ್ಕೆ ಮಾಡಿ ನಂತರ ಕೆಳಗೆ ನೀಡಿರುವ ಮುಂದೆ(Go) ಎಂದು ಕ್ಲಿಕ್ ಮಾಡಿ.
  3. ಮುಂದಿನ ಪುಟದಲ್ಲಿ Farmers ವಿಭಾಗದಲ್ಲಿ Check Status ಮೇಲೆ ಕ್ಲಿಕ್ ಮಾಡಿ.
  4. ಆನಂತರ ಮುಂದಿನ ಪುಟದಲ್ಲಿ proposal Number ಅಥವಾ Mobile Number ಆಯ್ಕೆ ಮಾಡಿ ಅದನ್ನು ಭರ್ತಿ ಮಾಡಿ. ಆನಂತರ captcha code ಹಾಗೆ ಸರ್ಚ್ ಮೇಲೆ ಕ್ಲಿಕ್ ಮಾಡಿ.

ನಾಲ್ಕನೇ ಹಂತ ನಂತರ ನಿಮ್ಮ ಬೆಳೆ ವಿಮೆ ಸಂಪೂರ್ಣ ಮಾಹಿತಿ ನಿಮಗೆ ಕಾಣಿಸುತ್ತದೆ.

ರೈತರ ನಿಮಗೆ ಇನ್ನೊಂದು ಸಲಹೆ ಏನೆಂದರೆ ಜಿಪಿ ಆರ್ಎಸ್ ಮಾಡಲು ಬರಲಿಲ್ಲವೆಂದರೆ ನಿಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ಅಲ್ಲಿ ಮಾಹಿತಿಯನ್ನು ಪಡೆಯಿರಿ.

Previous Post Next Post

Ads

Ads

نموذج الاتصال

×