ಹಲೋ ಸ್ನೇಹಿತರೇ ನಮಸ್ಕಾರ, ನಿಮಗೆಲ್ಲರಿಗೂ ನಮ್ಮ ಲೇಖನಕ್ಕೆ ಸ್ವಾಗತ, ದೇಶದ ಎತಿ ದೊಡ್ಡ ಬ್ಯಾಂಕ್ ಆದ ಸ್ಟೇಟ್ ಬ್ಯಾಂಕ್ ಗ್ರಾಹಕರಿಗೆ ಹೊಸ ಸುದ್ದಿ ತಂದಿದೆ. ಎಲ್ಲಾ ಎಸ್ ಬಿ ಐ ಬ್ಯಾಂಕ್ ಗ್ರಾಹಕರಿಗೆ ಹೊಸ ಹೊಸ ಸೇವೆಗಳನ್ನು ಒದಗಿಸುತ್ತಲೇ ಇದೆ. ಹಾಗೆಯೇ ಇಂತಹ ಸೇವೆಗಳಲ್ಲಿ ಇನ್ನೊಂದು ಹೊಸ ಸೇವೆಗಳನ್ನು ಎಸ್ ಬಿಐ ಬ್ಯಾಂಕ್ ಜಾರಿಗೆ ತಂದಿದೆ. ಈ ಹೊಸ ಘೋಷಣೆಯನ್ನು ಈ ಕೆಳಗಿನ ಲೇಖನದಲ್ಲಿ ವಿವರವಾಗಿ ತಿಳಿಸಲಾಗಿದೆ. ಎಲ್ಲರೂ ಸಂಪೂರ್ಣವಾಗಿ ನಮ್ಮ ಲೇಖನವನ್ನು ಓದಿ.
ದೇಶದ ಎಲ್ಲಾ ಎಸ್ ಬಿ ಐ ಗ್ರಾಹಕರಿಗೆ ಸರ್ಕಾರವು ಹೊಸ ಸೇವೆಯನ್ನು ಆರಂಭಿಸಿದೆ. ದೇಶದ ಅತಿ ದೊಡ್ಡ ಬ್ಯಾಂಕ್ ಎಂದು ಕರೆಯಲ್ಪಡುವ ಎಸ್ ಬಿ ಐ ಬ್ಯಾಂಕ್ ಹೊಸ ಸೇವೆಯನ್ನು ಘೋಷಣೆ ಮಾಡಿದೆ.
1. ಮೊದಲಿಗೆ ಎಸ್ ಬಿ ಐ ಗ್ರಾಹಕರಿಗೆ ಹೊಸ ಸೇವೆಯನ್ನು ಎಟಿಎಂ ತನ್ನ ಎಲ್ಲಾ ಕೋಟ್ಯಾಂತರ ಬಳಕೆದಾರರಿಗೆ ಯುಪಿಐ ಎಟಿಎಂ ವಿತ್ ಡ್ರಾವೆಲ್ ಎಂಬ ಹೊಸ ಸೇವೆಯನ್ನು ಜಾರಿಗೆ ತಂದಿದೆ. ಈ ಯುಪಿಐ ಎಟಿಎಂ ವಿತ್ ಡ್ರಾವೆಲ್ ಸೇವೆಯನ್ನು ಬಳಕೆ ಮಾಡಿಕೊಂಡು ನೀವು ವಿತೌಟ್ ಡೆಬಿಟ್ ಕಾರ್ಡ್‌ನಿಂದ ಯಾವುದೇ ಎಟಿಎಂ ಮೂಲಕ ಹಣವನ್ನು ಯುಪಿಐ ಬಳಸಿ ಹಣವನ್ನು ವಿತ್ ಡ್ರಾವೆಲ್ ಮಾಡಿಕೊಳ್ಳಬಹುದಾಗಿದೆ. ಈ ರೀತಿಯ ಒಂದು ಹೊಸ ನೂತನ ಸೇವೆಯನ್ನು ಎಸ್ ಬಿ ಐ ಪ್ರಾರಂಭಿಸಿದ್ದು, ಇನ್ನು ಕೆಲವೇ ದಿನಗಳಲ್ಲಿ ಗ್ರಾಹಕರಿಗೆ ಈ ಸೇವೆ ಸೌಲಭ್ಯ ಸಿಗಲಿದೆ.
2. ಎಸ್ ಬಿ ಐ ಈ ಹಿಂದೆ ಜಾರಿ ಮಾಡಿದಂತೆ ಎಸ್ ಬಿ ಐ ವಾಟ್ಸಪ್ ಇಂಟರ್ನೆಟ್ ಬ್ಯಾಂಕಿಂಗ್ ಸೇವೆಯನ್ನು ಹಲವರು ಈ ಸೇವೆಯ ಸೌಲಭ್ಯವನ್ನು ಪಡೆದುಕೊಳ್ಳುತ್ತಿದ್ದಾರೆ. ನೀವು ಬ್ಯಾಂಕ್‌ಗೆ ಭೇಟಿ ಕೊಡದೇ ಸುಲಭವಾಗಿ ಮನೆಯಲ್ಲಿಯೇ ಕುಳಿತು ನಿಮ್ಮ ವಾಟ್ಸಪ್ ಮೂಲಕ ಎಸ್ ಬಿ ಐ ಬ್ಯಾಂಕಿಂಗ್‌ನ ವಿವಿಧ ಸೇವೆಗಳನ್ನು ಪಡೆದುಕೊಳ್ಳಬಹುದು. ನೀವು WAREG ಎಂದು ಟೈಪ್ ಮಾಡಿ ನಿಮ್ಮ ಅಕೌಂಟ್ ನಂಬರ್ ಅನ್ನು ಹಾಕಿ ನಂತರ ಈ ನಂಬರ್ ಗೆ ಸೆಂಡ್ ಮಾಡಿದ ನಂತರ ನಿಮಗೆ ವಾಟ್ಸಪ್ ಮೆಸೇಜ್ ಬರುತ್ತದೆ. ನಂತರ ನೀವು ಹಾಯ್ ಎಂದು ಮೆಸೆಜ್ ಹಾಕಿದರೆ ಸಾಕು ವಾಟ್ಸಪ್ ಇಂಟರ್ನೆಟ್ ಬ್ಯಾಂಕಿಂಗ್ ಸೇವೆ ಸೌಲಭ್ಯವನ್ನು ಪಡೆಯಬಹುದಾಗಿದೆ. ವಿವಿಧ ಬಗೆಯ ಹಲವು ಸೇವೆಗಳನ್ನು ವಾಟ್ಸಪ್ ಬ್ಯಾಂಕಿಂಗ್ ಸೇವೆಗಳು ಲಭ್ಯವಾಗುತ್ತವೆ. ನಿಮ್ಮ ಬ್ಯಾಂಕ್ ಬ್ಯಾಲೆನ್ಸ್, ಸ್ಟೇಟ್ ಮೆಂಟ್ ಪಡೆದುಕೊಳ್ಳುವುದು, ಸಾಲ ಸೌಲಭ್ಯದ ಬಗ್ಗೆ ತಿಳಿದುಕೊಳ್ಳಲು ಸಹಾಯವಾಗುತ್ತದೆ.
3. ಇದುವರೆಗೆ ಯಾರು ತಮ್ಮ ಅಕೌಂಟ್ ಗೆ ಫೋನ್ ನಂಬರ್ ಹಾಗು ಇ ಮೇಲ್ ಅನ್ನು ಲಿಂಕ್ ಮಾಡಿಲ್ಲ ಅಂತಹವರಿಗೆ ಲಿಂಕ್ ಮಾಡಿಸಲು ಸೂಚಿಸಲಾಗಿದೆ. ಗ್ರಾಹಕರು ತಮ್ಮ ಎಲ್ಲಾ ವಹಿವಾಟುಗಳ ಬಗ್ಗೆ ಮಾಹಿತಿ ಹೊಂದಲು ತಮ್ಮ ಅಕೌಂಟ್‌ಗೆ ಮೊಬೈಲ್ ನಂಬರ್ ಹಾಗು ಇ ಮೇಲ್ ಅನ್ನು ನೋಂದಣಿ ಮಾಡಿಕೊಳ್ಳುವುದು ಅಗತ್ಯ ಇದರಿಂದ ಗ್ರಾಹಕರಿಗೆ ಸುಲಭವಾದ ಮಾಹಿತಿ ಸಿಗುತ್ತದೆ.