6 ಲಕ್ಷ ರೈತರಿಗೆ ತಲುಪದ ಪಿಎಂ ಕಿಸಾನ್ ಹಣ-ಉಳ್ಳವರ ಪಾಲಿಗೆ ಪಿಎಂ ಕಿಸಾನ್ ಹಣ






ಕೇಂದ್ರದ ಮಹತ್ವಕಾಂಕ್ಷಿ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ ಹಣ ಅರ್ಧದಷ್ಟು ರೈತರಿಗೆ ತಲುಪಿಲ್ಲ.


 ಸ್ವತಹ ಕೃಷಿ ಇಲಾಖೆ ಈ ಹಿಂದೆ ನಡೆಸಿರುವ ಕೃಷಿ ಸಮೀಕ್ಷೆ ಪ್ರಕಾರ ರಾಜ್ಯದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸೇರಿದ ಜಮೀನು ಹೊಂದಿದ ರೈತರ ಸಂಖ್ಯೆ ಕ್ರಮವಾಗಿ 9.73 ಲಕ್ಷ ಹಾಗೂ 5.21 ಲಕ್ಷ. ಈ ಪೈಕಿ ಸಣ್ಣ ಮತ್ತು ಅತಿ ಸಣ್ಣ ರೈತರ ಸಂಖ್ಯೆ ( ಎರಡು ಹೆಕ್ಟರ್ ಒಳಗಿನ ) ಕ್ರಮವಾಗಿ 8.3 ಲಕ್ಷ ಹಾಗೂ 4 ಲಕ್ಷ ಎಂದು ಅಂದಾಜಿಸಲಾಗಿದೆ. ಇದರಲ್ಲಿ ಪ್ರಸ್ತುತ ಪಿಎಮ್ ಕಿಸಾನ್ ಸನ್ಮಾನ್  ಯೋಜನೆಯ ಫಲಾನುಭವಿಗಳ  ಸಂಖ್ಯೆ ಸುಮಾರು 7 ಲಕ್ಷ ಮಾತ್ರ ಎಂಬುದು ಬೆಳಕಿಗೆ ಬಂದಿದೆ.

 ಸಣ್ಣ ಮತ್ತು ಅತಿ ಸಣ್ಣ ಬಡ ರೈತರ ಖಾತೆಗೆ ಮೂರು ಕಂತುಗಳಲ್ಲಿ ಕೇಂದ್ರದಿಂದ ವಾರ್ಷಿಕ 6,000ಗಳನ್ನ ನೇರವಾಗಿ ಖಾತೆಗೆ ಜಮೀನು ಮಾಡುವ ಜನಪ್ರಿಯ ಯೋಜನೆ ಕಿಸಾನ್ ಸಮ್ಮಾನ್. ಈ ಯೋಜನೆಯ ಪ್ರೋತ್ಸಾಹಿಸಲು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ತಮ್ಮ ಆಡಳಿತದಲ್ಲಿ 4000 ಸೇರಿಸಿ ವಾರ್ಷಿಕ 10,000ಕ್ಕೆ ಏರಿಸಿದ್ದರು. ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸೇರಿದ ಅರ್ಹ ರೈತರಿಗೆ ಪರಿಶಿಷ್ಟ ಜಾತಿ ಉಪ ಯೋಜನೆ ಮತ್ತು ಗಿರಿಜನ ಉಪ ಯೋಜನೆ ಮೂಲಕ ಹಣ ಒದಗಿಸಲಾಗುತ್ತದೆ.


 ಜಮೀನು ಮಾಲಕತ್ವದ ದಾಖಲೆಯಲ್ಲಿ ಹೆಸರು ವರ್ಗಾವಣೆಯಾಗದಿರುವುದು ಒಂದು ಕಾರಣ ಇರಬಹುದು. ಆದರೆ ಅದೊಂದೇ ಅಲ್ಲ. ಸರಕಾರಿ ನೌಕರಿಯಲ್ಲಿರಬಹುದು ತೆರಿಗೆ ಪಾವತಿದಾರರು ಆಗಿರಬಹುದು. ಕಿಸಾನ್ ಸಮ್ಮಾನ್ ಯೋಜನೆ ಅಡಿ ದಾಖಲೆಗಳು ಹೊಂದಾಣಿಕೆಯಾಗದೆ ತಿರಸ್ಕೃತಪಟ್ಟವು  ತುಂಬಾ ಕಡಿಮೆ. ವಿಮೆ ವಿಷಯದಲ್ಲಿ ಈ ಸಮಸ್ಯೆ ಇದೆ ಎನ್ನುತ್ತಾರೆ ಕೃಷಿ ಇಲಾಖೆ ಆಯುಕ್ತ ಬಿ ಶರತ್ ಅವರು.

ಫಲಾನುಭವಿಗಳು ಎಷ್ಟು?


 ಎಸ ಸಿ ಪಿ/ಟಿ ಎಸ್ ಪಿ ಮೂಲಕ 2021-22 ನೇ ಸಾಲಿನಲ್ಲಿ ಪರಿಶಿಷ್ಟ ಜಾತಿಯ ಅರ್ಹ 4.36 ಲಕ್ಷ ಫಲಾನುಭವಿಗಳಿಗೆ 145 ಕೋಟಿ ರೂಪಾಯಿ ಹಾಗೂ ಪರಿಶಿಷ್ಟ ಪಂಗಡಕ್ಕೆ ಸೇರಿದ 2.63 ಲಕ್ಷ ರೈತರಿಗೆ 81 ಕೋಟಿ ರೂ ಹಂಚಿಕೆ ಮಾಡಲಾಗಿದೆ. ಉಳಿದ ಸುಮಾರು 6 ಲಕ್ಷ ಮಂದಿ ವಂಚಿತರಾಗಿದ್ದಾರೆ. ಈ ಮದ್ಯ 2022 23ನೇ ಸಾಲಿಗೆ ಪರಿಶಿಷ್ಟ ಜಾತಿಗೆ 240 ಕೋಟಿ ಹಾಗೂ ಪರಿಶಿಷ್ಟ ಪಂಗಡಕ್ಕೆ 120 ಕೋಟಿ ರೂ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಯಾಕೆ ಸಿಗುತ್ತಿಲ್ಲ?

 ಯೋಜನೆಯಿಂದ ವಂಚಿತರಾಗಲು ಪ್ರಮುಖ ಕಾರಣ ಬಹುತೇಕರಿಗೆ ಹೆಸರಿಗೆ ಅವರ ತಂದೆ ಅಥವಾ ತಾತನ ಹೆಸರಿನಲ್ಲಿರುವ ಜಮೀನುಗಳು ವರ್ಗಾವಣೆಯಾಗಿರುವುದಿಲ್ಲ. ಆದರೆ ಕೃಷಿ ಇಲಾಖೆಗೆ ತಮ್ಮ ಆಧಾರ್ ಸಂಖ್ಯೆ ಮತ್ತು ಬ್ಯಾಂಕ್ ಖಾತೆ ನೀಡಿರುತ್ತಾರೆ. ಇದರಿಂದ ಅನಾಯಾಸವಾಗಿ ಅರ್ಜಿಗಳು ತಿರಸ್ಕೃತಗೊಳ್ಳುತ್ತಿವೆ. ಈ ಬಗ್ಗೆ ಬಹುತೇಕ ರೈತರಿಗೆ ಮಾಹಿತಿ ಇಲ್ಲ. ಪರಿಣಾಮ ಬಹುದೊಡ್ಡ ವರ್ಗ ಯೋಜನೆಯಿಂದ ವಂಚಿತವಾಗುತ್ತಿದೆ.

ಇದನ್ನೂ ಓದಿ

ಅನರ್ಹ ಪಿಎಂ ಕಿಸಾನ್ ಸಮ್ಮಾನ್ ಯೋಜನೆಯ ಫಲಾನುಭವಿಗಳಿಗೆ ಕೃಷಿ ಇಲಾಖೆ, ಬಿಗ್ ಶಾಕ್ ನೀಡಿದ್ದು ಆದಾಯ ತೆರಿಗೆ ಪಾವತಿಸುವ 95,830 ಮಂದಿ ಫಲಾನುಭವಿಗಳಿಂದ ಹಣ ವಸೂಲಿಗೆ ಸಜ್ಜಾಗಿದೆ.

 ಹೌದು ಆದಾಯ ತೆರಿಗೆ ಪಾವತಿಸುವ ರಾಜ್ಯದ 95,830 ಮಂದಿ ಪ್ರದಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ ಅಡಿ ನಿಯಮಬಾಹಿರವಾಗಿ ಆರ್ಥಿಕ ನೆರವು ಪಡೆದಿರುವುದನ್ನು ಪರಿಶೀಲನೆ ನಡೆಸಿರುವ ಕೃಷಿ ಇಲಾಖೆ ಇದೀಗ ಅವರಿಂದ ಹಣ ವಸೂಲಿಗೆ ಮುಂದಾಗಿದೆ.

 ಆದಾಯ ತೆರಿಗೆ ಪಾವತಿಸುವ ರೈತರಿಗೆ ಕಿಸಾನ್ ಸಮ್ಮಾನ್ ಯೋಜನೆ ಅಡಿ ಹಣ ಪಡೆಯಲು ಅನಾರರಾಗಿದ್ದು ಇದನ್ನು ಮುಚ್ಚಿಟ್ಟು ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ನಿಯಮ ವಾಹಿರವಾಗಿ ಕೋಟ್ಯಾಂತರ ರೂಪಾಯಿ ನೆರವು ಪಡೆಯಲಾಗಿದೆ. ಇದನ್ನು ವಸೂಲಿ ಮಾಡಲು ಕೃಷಿ ಇಲಾಖೆ ಮುಂದಾಗಿದೆ.

 ರಾಜ್ಯದ ಒಟ್ಟು 95,830 ಅನರ್ಹ  ಫಲಾನುಭವಿಗಳ ಪೈಕಿ ಬೆಳಗಾವಿ ಜಿಲ್ಲೆಯಲ್ಲಿಯೇ ಅತಿ ಹೆಚ್ಚು ಫಲಾನುಭವಿಗಳು ಪತ್ತೆಯಾಗಿದ್ದಾರೆ. ಬೆಳಗಾವಿಯಲ್ಲಿ 7748, ಕಲಬುರ್ಗಿಯಲ್ಲಿ 5,109, ವಿಜಯಪುರದಲ್ಲಿ 5033, ಬೀದರ್ ನಲ್ಲಿ 4951, ತುಮಕೂರು 4,648, ಮಂಡ್ಯ 4537, ಹಾಸನ 4,260, ಉಡುಪಿ 3882, ಬಾಗಲಕೋಟೆ 3,694, ರಾಮನಗರ ಜಿಲ್ಲೆಯಲ್ಲಿ 3452 ಮಂದಿ ಅನಾರೋ ಫಲಾನುಭವಿಗಳು ಪತ್ತೆಯಾಗಿದ್ದಾರೆ.

ಸಣ್ಣ ಮತ್ತು ಅತಿ ಸಣ್ಣ ರೈತರ ಸಂಕಷ್ಟಕ್ಕೆ ಸ್ಪಂದಿಸಲೆಂದು ಕೇಂದ್ರ ಸರ್ಕಾರ ಜಾರಿ ಮಾಡಿದ ಪಿಎಂ ಕಿಸಾನ್ ಯೋಜನೆ ಅಡಿ 3.97 ಲಕ್ಷ ಅನರ್ಹರು ಹೆಸರು ನೋಂದಾಯಿಸಿ ಹಣ ಪಡೆದು ವಂಚಿಸಿರುವುದು ಪತ್ತೆಯಾಗಿದ್ದು ಈ ರೀತಿ ಒಟ್ಟು 442 ಕೋಟಿ ಪಾವತಿಯಾಗಿದೆ.

 ಯೋಜನೆ ಅಡಿ ಸ್ವಯಂ ನೊಂದಣಿ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿತ್ತು. ಹೀಗಾಗಿ 3312 ಮೃತರ ಖಾತೆಗಳಿಗೂ ಹಣ ಪಾವತಿಯಾಗಿದೆ.

 ಅನರ್ಹ ರೈತರಿಂದ ಹಣ ವಸೂಲಿ ಮಾಡಲು ಅಧಿಕಾರಿಗಳು ಮುಂದಾಗಿದ್ದಾರೆ. ಕೇಂದ್ರ ಸರ್ಕಾರ 2019ರಲ್ಲಿ ಪಿಎಂ ಕಿಸಾನ್ ಯೋಜನೆಯನ್ನು ಜಾರಿ ಮಾಡಿತ್ತು. ಕೇಂದ್ರ ಸರ್ಕಾರ ಒಬ್ಬ ರೈತರಿಗೆ 6000 ನೀಡುವ ಜೊತೆಗೆ ಕರ್ನಾಟಕದಲ್ಲಿರುವ ಬಿಜೆಪಿ ಸರ್ಕಾರ ಈ ಯೋಜನೆಗೆ ಇನ್ನೂ ನಾಲ್ಕು ಸಾವಿರ ಸೇರಿಸಿ ಒಟ್ಟು 10,000ವನ್ನು ಪಾವತಿ ಮಾಡುತ್ತಿದೆ.

 ಆದಾಯ ತೆರಿಗೆ ಪಾವತಿಸುವ ಇಡುವಳಿದಾರರು ಮತ್ತು ಸಾಂಸ್ಥಿಕ ಭೂ ಹಿಡುವಳಿದಾರರು ಈ ಯೋಜನೆಗೆ ಅರ್ಹರಲ್ಲ. ಆದರೆ ಇಂತಹ ರೈತರು ಯೋಜನೆಯನ್ನು ದುರುಪಯೋಗಪಡಿಸಿಕೊಂಡಿದ್ದಾರೆ.

 ಈ ಯೋಜನೆಯನ್ನು ಆರಂಭಿಸಿದಾಗ ಸ್ವಯಂ ನೊಂದಣಿ ಮಾಡಿಕೊಳ್ಳಲು ರೈತರಿಗೆ ಮುಕ್ತ ಅವಕಾಶ ನೀಡಲಾಗಿತ್ತು ಆಗ ಇದರ ದುರ್ಬಳಕೆಯಾಗಿದೆ ಎಂದು ಕೃಷಿ ಆಯುಕ್ತ ಬಿ ಶರತ್ ಅವರು ತಿಳಿಸಿದ್ದಾರೆ.

ಪಿಎಂ ಕಿಸಾನ್ ಫಲಾನುಭವಿಗಳಿಗೆ ಸಿಹಿಸುದ್ದಿ

 ಅನರ್ಹ ರೈತರಿಂದ ಹಣವನ್ನು ಹಿಂದಕ್ಕೆ ಪಡೆಯಲು ಕ್ರಮ ತೆಗೆದುಕೊಳ್ಳಲು ಈಗಾಗಲೇ ಬ್ಯಾಂಕ್ಗಳಿಗೆ ಪತ್ರ ಬರೆಯಲಾಗಿದೆ. ಹಣವನ್ನು ಹಿಂದಕ್ಕೆ ಪಡೆಯುವ ಪ್ರಕ್ರಿಯೆಯಲ್ಲಿ ಬ್ಯಾಂಕುಗಳಿಗೆ ನೆರವಾಗಲು ಎಲ್ಲಾ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ. ಮುಂದೆ ಇಂತಹ ವಂಚನೆ ನಡೆಯಲು ಸಾಧ್ಯವಾಗದಂತೆ ಸರ್ಕಾರ ಪರಿಶೀಲನ ಪ್ರಕ್ರಿಯೆಯನ್ನು ಬಿಗಿಗೊಳಿಸಿದೆ ಎಂದು ಅವರು ತಿಳಿಸಿದ್ದಾರೆ.

ಯೋಜನೆಗೆ ಅನರ್ಹರು ಯಾರು?

 ಆದಾಯ ತೆರಿಗೆ ಪಾವತಿ ಮಾಡುತ್ತಿರುವವರು

 ಸಾಂಸ್ಥಿಕ ಭೂ ಹಿಡುವಳಿದಾರರು

 ತಿಂಗಳಿಗೆ 10,000 ಕ್ಕಿಂತ ಹೆಚ್ಚು ಪಿಂಚಣಿ ಪಡೆಯುತ್ತಿರುವವರು

 ವೈದ್ಯರು, ಇಂಜಿನಿಯರ್ ಗಳು, ವಕೀಲರು, ಸಿಎ ಮತ್ತು ಆರ್ಕಿಟೆಕ್ಟ್ಗಳು

 ಸರ್ಕಾರಿ ನೌಕರರು

 ಹಾಲಿ ಮತ್ತು ಮಾಜಿ ಜನಪ್ರತಿನಿಧಿಗಳು


 ಹಣ ಪಡೆದ ಅನರ್ಹರು

 ಆದಾಯ ತೆರಿಗೆ ಪಾವತಿಸುತ್ತಿರುವ 91,969 ರೈತರು-104.24 ಕೋಟಿ ರೂ

 ಭೂಹಿಡುವಳಿದಾರರು -1,99,240 ರೈತರು-295.66 ಕೋಟಿ ರೂ

 ವಂಚಿಸಿ ಸ್ವಯಂ ನೊಂದಣಿ
1,06,416 ರೈತರು-39.44 ಕೋಟಿ ರೂ

ಇಂತಿ ನಿಮ್ಮ  

ಕಿರಣ್

Previous Post Next Post

Ads

نموذج الاتصال

×