ಮನೆಯಲ್ಲಿ ಬಂಗಾರ ಇದ್ದವರಿಗೆ ಮತ್ತು ಚಿನ್ನ ಪ್ರಿಯರಿಗೆ, ಏಪ್ರಿಲ್‌ 1 ರಿಂದ ಈ ಕೆಲಸ ಕಡ್ಡಾಯ.! ತಪ್ಪದೇ ಎಲ್ಲರೂ ಈ ಕೂಡಲೇ ನೋಡಿ

 ಹಲೋ ಸ್ನೇಹಿತರೇ ನಮಸ್ಕಾರ, ಚಿನ್ನದ ಆಭರಣಗಳನ್ನು ಖರೀದಿಸಲು ಯೋಜಿಸುತ್ತಿದ್ದರೆ, ನಿಮಗೆ ದೊಡ್ಡ ಸುದ್ದಿಯಾಗಿದೆ. ಚಿನ್ನ ಪ್ರಿಯರು ನೋಡಲೇಬೇಕಾದ ಮಾಹಿತಿ ಇದಾಗಿದೆ. ಕೇಂದ್ರ ಸರ್ಕಾರದಿಂದ ಹೊಸ ರೂಲ್ಸ್‌ ಜಾರಿ ಮಾಡಲಾಗಿದೆ. ಏಪ್ರಿಲ್‌ 1 ರಿಂದ ಹಾಲ್‌ಮಾರ್ಕ್ ಇಲ್ಲದ ಆಭರಣಗಳನ್ನು ಅನುಮತಿಸಲಾಗುವುದಿಲ್ಲ. ಸರ್ಕಾರದ ಈ ವಿಧಾನದ ಮುಖ್ಯವಾದ ಮಾಹಿತಿಯನ್ನು ಈ ಕೆಳಗಿನ ಲೇಖನದಲ್ಲಿ ವಿವರವಾಗಿ ತಿಳಿಸಲಾಗಿದೆ. ಎಲ್ಲರೂ ನಮ್ಮ ಲೇಖನವನ್ನು ಸಂಪೂರ್ಣವಾಗಿ ಓದಿ.








ಚಿನ್ನ ಇರುವವರಿಗೆ ಪ್ರತಿಯೊಬ್ಬರಿಗೂ ಕೇಂದ್ರ ಸರ್ಕಾರವು ಹೊಸ ನಿಯಮವನ್ನು ಜಾರಿಗೆ ತಂದಿದೆ. ಏಪ್ರಿಲ್‌ 1 ರಿಂದ ಹಾಲ್‌ ಮಾರ್ಕ್‌ ಇಲ್ಲದ HUID ಆಭರಣಗಳನ್ನು ಮಾರಾಟ ಮಾಡುವಂತಿಲ್ಲ ಎಂದು ಕೇಂದ್ರ ಗ್ರಾಹಕ ವ್ಯವಹಾರ ಆಹಾರ ಹಾಗೂ ಸಾರ್ವಜನಿಕ ವಿತರಣೆ ಸಚಿವಾಲಯ ತಿಳಿಸಿದೆ. ಗ್ರಾಹಕರ ಹಿತದೃಷ್ಠಿಯಿಂದ ಮಾರ್ಚ್‌ 31 ರ ಬಳಿಕ ಹಾಲ್‌ ಮಾರ್ಕ್‌ ರಹಿತ ಚಿನ್ನಭರಣಗಳ ಮಾರಾಟಕ್ಕೆ ಅನುಮತಿ ಇರುವುದಿಲ್ಲ ಎಂದು ಇಲಾಖೆ ಹೇಳಿದೆ. 6 ಅಂಕಿಗಳ ಹಾಲ್‌ ಮಾರ್ಕ್‌ HUID ಈ ಹಿಂದೆ 4 ಅಂಕಿಗಳ HUID ಗಳನ್ನು ಬಳಸಲಾಗುತ್ತಿತ್ತು. ಈಗ ನಾಲ್ಕು ಮತ್ತು 3 ಅಂಕಿಗಳನ್ನು ಬಳಸಲಾಗುತ್ತಿದೆ. ಆದರೆ ಮಾರ್ಚ್‌ 31 ರ ಬಳಿಕ 6 ಅಂಕಿಗಳ ಕೋಡ್‌ ಮಾತ್ರ ಬಳಕೆಯಾಗಲಿದೆ.

ಹಾಲ್‌ ಮಾರ್ಕ್‌ ಮಾಡುವ ಸಂದರ್ಭದಲ್ಲಿ ಪ್ರತಿ ಆಭರಣಕ್ಕೂ ಇದನ್ನು ನೀಡಲಾಗುತ್ತದೆ. ಹಾಗೂ ಇದು ಪ್ರತಿಯೊಂದು ಆಭರಣಕ್ಕೂ ಭಿನ್ನವಾಗಿರುತ್ತದೆ. ಹಾಲ್‌ ಮಾರ್ಕಿಂಗ್‌ ಸೆಂಟರ್ನಲ್ಲಿ ಹಾಲ್‌ ಮಾರ್ಕ್‌ ಗುರುತನ್ನು ಹಾಕಲಾಗುತ್ತದೆ. ಇಲಾಖೆಯ ಪ್ರಕಾರ ಹಾಲ್‌ ಮಾರ್ಕ್‌ ಗುರುತಿನಿಂದಾಗಿ ವೈಯಕ್ತಿಕ ಚಿನ್ನಾಭರಣವನ್ನು ಸುಲಭವಾಗಿ ಗುರುತಿಸಬಹುದು. HUID ಅಧಾರಿತ ಹಾಲ್‌ ಮಾರ್ಕ್‌ ಪದ್ದತಿಯಲ್ಲಿ ತನ್ನಿಂತಾನೆ ಆಭರಣಗಳ ನೋಂದಣಿಯಾಗುತ್ತದೆ. ಚಿನ್ನದ ಮಾರಾಟದಲ್ಲಿ ಅಕ್ರಮ ಆಗುವುದನ್ನು ತಡೆಯಲಾಗುತ್ತದೆ. ಆಭರಣಗಳ ಗುಣಮಟ್ಟ ಮತ್ತು ಪಾರದರ್ಶಕದ ಕೊರತೆಯಾಗುವುದನ್ನು ನಿವಾರಿಸಬಹುದು. ಹೀಗಾಗಿ ಉದ್ಯಮಿ ಮತ್ತು ಗ್ರಾಹಕ ಸ್ನೇಹಿ ನಿರ್ಧಾರ ಎಂದು ಸರ್ಕಾರ ತಿಳಿಸಿದೆ.

ಮಾನ್ಯತೆ ಪಡೆದ ಸಂಸ್ಥೆಯ ಮೂಲಕ ಹಾಲ್‌ ಮಾರ್ಕ್‌ ನೀಡುವುದರಿಂದ ಆಭರಣಗಳ ಗುಣಮಟ್ಟ ಮತ್ತು ಪರಿಶುದ್ದತೆಯ ಖಾತರಿಗೆ ಸಹಾಯಕ, ನಿಮ್ಮಲ್ಲಿ ಹಾಲ್‌ ಮಾರ್ಕ್‌ ಇಲ್ಲದೇ ಇರುವ ಹಳೆಯ ಆಭರಣಗಳು ಇಲ್ಲದೇ ಇದ್ದರೆ ಅವುಗಳಿಗೆ ಹಾಲ್‌ ಮಾರ್ಕ್‌ ಹೇಗೆ ಪಡೆಯಲು ಅವಕಾಶ ಕಲ್ಪಿಸಿದೆ. BIAS ನೋಂದಾಯಿತ ಆಭರಣವನ್ನು ಇದಕ್ಕಾಗಿ ಸಂಪರ್ಕಿಸಬಹುದು. ಅವರು ನಿಮ್ಮ ಆಭರಣಗಳನ್ನು BIAS ಮಾನ್ಯತೆ ಪಡೆದ A & H ಸೆಂಟರ್‌ ನಲ್ಲಿ ಪರೀಕ್ಷಿಸಬಹುದು. ಇಲ್ಲಿ ಆಭರಣದ ಪರಿಶುದ್ದತೆ ಅನುಸಾರ ಹಾಲ್‌ ಮಾರ್ಕ್‌ ಗುರುತನ್ನು ಪಡೆಯಬಹುದು. ಹಾಲ್‌ ಮಾರ್ಕ್‌ ಇರುವ ಚಿನ್ನದ ಮರುಮಾರಾಟದ ವೇಳೆ ಆಗಿನ ದರವೇ ಸಿಗುತ್ತದೆ. ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳು ಇದರ ಆಧಾರದ ಮೇಲೆ ಸುಲಭವಾಗಿ ಸಾಲವನ್ನು ನೀಡುತ್ತದೆ.

HUID ಎಂದರೇನು?

HUID ಎಂಬುದು ಆರು ಅಕ್ಷರಗಳ ಅಲ್ಫಾ-ಸಂಖ್ಯೆಯ ಸಂಕೇತವಾಗಿದೆ. ಇದರೊಂದಿಗೆ ಅವರು ಖರೀದಿಸುತ್ತಿರುವ ಚಿನ್ನದ ಸತ್ಯಾಸತ್ಯತೆ ಮತ್ತು ಶುದ್ಧತೆಯ ಬಗ್ಗೆ ತಿಳಿಯುತ್ತದೆ. ಪ್ರತಿಯೊಂದು ಆಭರಣವು ಈ ಸಂಖ್ಯೆಯನ್ನು ಹೊಂದಿರಬೇಕು. ಸಂಖ್ಯೆಯನ್ನು ಬಳಸಿಕೊಂಡು ಈ ಬಗ್ಗೆ ಎಲ್ಲಾ ವಿವರಗಳನ್ನು ಪಡೆಯಬಹುದು. ಸದ್ಯಕ್ಕೆ, ದೇಶವು 1,338 ಹಾಲ್‌ಮಾರ್ಕಿಂಗ್ ಕೇಂದ್ರಗಳನ್ನು ಹೊಂದಿದೆ. HUID ಜೊತೆಗೆ, ಆಭರಣ ವ್ಯಾಪಾರಿಗಳು ಗ್ರಾಹಕರನ್ನು ವಂಚಿಸಲು ಸಾಧ್ಯವಾಗುವುದಿಲ್ಲ.


Previous Post Next Post

Ads

Ads

نموذج الاتصال

×