ಪಾನ್ ಕಾರ್ಡ್ ಇದ್ದವರ ಗಮನಕ್ಕೆ , ಮಾರ್ಚ್ 31 ಒಳಗೆ ಈ ಕೆಲ್ಸ ಮಾಡಿ | Pan Card New rules updates 2023, PAN card link Aadhar card Online, Apply


ಎಲ್ಲರಿಗೂ ನಮಸ್ಕಾರ. ಇವತ್ತಿನ ಲೇಖನದಲ್ಲಿ, ಆಧಾರ್ ಕಾರ್ಡ್(Aadhar card)ಜೊತೆಗೆ ಪಾನ್ ಕಾರ್ಡ್(PAN Card)ಅನ್ನು ಜೋಡಿಸುವುದರ(link) ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ. ಆಧಾರ್ ಕಾರ್ಡ್ ಜೊತೆಗೆ ಪಾನ್ ಕಾರ್ಡ್ ಅನ್ನು ಲಿಂಕ್ ಮಾಡಲು ಕೊನೆಯ ದಿನಾಂಕ ಇದೆ ತಿಂಗಳಾಗಿದೆ. ಇನ್ನು ನೀವು ತಡ ಮಾಡುವಂತಿಲ್ಲ ಈ ಕೂಡಲೇ ಆಧಾರ್ ಕಾರ್ಡ್ ಜೊತೆಗೆ ಪಾನ್ ಕಾರ್ಡ್ ಎಂದು ಲಿಂಕ್ ಮಾಡಿಸಿಕೊಳ್ಳಿ. ಇವೆರಡನ್ನು ಹೇಗೆ ಜೋಡಣೆ ಮಾಡುವುದು?, ಆಧಾರ್ ಕಾರ್ಡ್ ಜೊತೆಗೆ ಪಾನ್ ಕಾರ್ಡ್ ಲಿಂಕ್ ಮಾಡದಿದ್ದರೆ ಏನಾಗುತ್ತದೆ?, ಇವುಗಳನ್ನು ಜೋಡಣೆ ಮಾಡಲು ಕೊನೆಯ ದಿನಾಂಕ ಏನು?, ಎಂಬುದರ ಸಂಪೂರ್ಣ ಮಾಹಿತಿಯನ್ನು ನಿಮಗೆ ಈ ಲೇಖನದ ಮೂಲಕ ತಿಳಿಸಿಕೊಡಲಾಗುತ್ತದೆ. ಇದೇ ರೀತಿಯ ಎಲ್ಲಾ  ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು ಈ ಕೆಳಗೆ ಕೊಡಲಾಗಿದೆ ದಯವಿಟ್ಟು ಸಂಪೂರ್ಣವಾಗಿ ಓದಿ. 

ಆಧಾರ್‌ನೊಂದಿಗೆ ಪ್ಯಾನ್ ಅನ್ನು ಲಿಂಕ್ ಮಾಡುವುದು ಕಡ್ಡಾಯ(Linking PAN with Aadhaar is mandatory) 2023:

ಕೇಂದ್ರ ಸರ್ಕಾರ ಕಳೆದ ಹಲವು ವರ್ಷಗಳಿಂದ ಪಾನ್‌ ಕಾರ್ಡ್‌ಗೆ ಆಧಾರ್ ಕಾರ್ಡ್‌ ಸಂಖ್ಯೆ ಜೋಡಿಸುವಂತೆ ಸಾರ್ವಜನಿಕರಿಗೆ ಮನವಿ ಮಾಡುತ್ತಲೇ ಬಂದಿದ್ದು, ಇದಕ್ಕಾಗಿ ಅವಧಿ ವಿಸ್ತರಿಸುತ್ತಲೇ ಇದೆ. ಆದರೆ, ಈವರೆಗೂ ಹಲವಾರು ಜನರು ಜೋಡಣೆಯನ್ನು ಮಾಡಿಲ್ಲ. ಆಧಾರ್‌ನೊಂದಿಗೆ ಪ್ಯಾನ್ ಅನ್ನು ಲಿಂಕ್ ಮಾಡಲು ಕೊನೆಯ ದಿನಾಂಕವನ್ನು ಮಾರ್ಚ್ 31, 2023 ರವರೆಗೆ ವಿಸ್ತರಿಸಲಾಗಿದೆ. ಜನರು ತಮ್ಮ ಪ್ಯಾನ್-ಆಧಾರ್ ಅನ್ನು ಗಡುವಿನೊಳಗೆ ಲಿಂಕ್ ಮಾಡಲು ವಿನಂತಿಸಲಾಗಿದೆ ಅಥವಾ ಪ್ಯಾನ್ ಸಂಖ್ಯೆ ನಿಷ್ಕ್ರಿಯಗೊಳ್ಳುತ್ತದೆ.

ಆಧಾರ್ ಕಾರ್ಡ್ ನೊಂದಿಗೆ ಪಾನ್ ಕಾರ್ಡನ್ನು ಜೋಡಣೆ ಮಾಡದಿದ್ದರೆ ಏನಾಗುತ್ತದೆ ಮತ್ತು ಎಷ್ಟು ದಂಡ(Fine)?:

ಪ್ಯಾನ್ ಅನ್ನು ಆಧಾರ್‌ನೊಂದಿಗೆ ಲಿಂಕ್ ಮಾಡದಿದ್ದರೆ, ಪ್ಯಾನ್ ನಿಷ್ಕ್ರಿಯವಾಗುತ್ತದೆ. ಅಂತಿಮ ದಿನಾಂಕದ ನಂತರ, PAN ಹೊಂದಿರುವವರು ತಮ್ಮ ಹತ್ತು-ಅಂಕಿಯ ವಿಶಿಷ್ಟ ಅಕ್ಷರಸಂಖ್ಯಾಯುಕ್ತ ಸಂಖ್ಯೆಯನ್ನು ಬಳಸಲು ಸಾಧ್ಯವಾಗುವುದಿಲ್ಲ ಮತ್ತು PAN ಗೆ ಲಿಂಕ್ ಮಾಡಲಾದ ಹಣಕಾಸಿನ ವಹಿವಾಟುಗಳನ್ನು ನಿಲ್ಲಿಸಲಾಗುತ್ತದೆ. ಹೆಚ್ಚುವರಿಯಾಗಿ, ಎಲ್ಲಾ ಆದಾಯ ತೆರಿಗೆ ಬಾಕಿ ರಿಟರ್ನ್ಸ್ ಪ್ರಕ್ರಿಯೆಯಿಂದ ನಿಲ್ಲಿಸಲಾಗುತ್ತದೆ. ಐಟಿ(Income Tax)ಕಾಯ್ದೆಯ ಪ್ರಕಾರ, ವಿನಾಯಿತಿ ವರ್ಗದ ಅಡಿಯಲ್ಲಿ ಬರದ ಎಲ್ಲಾ ಪ್ಯಾನ್-ಹೋಲ್ಡರ್‌ಗಳು ತಮ್ಮ ಶಾಶ್ವತ ಖಾತೆ ಸಂಖ್ಯೆಗಳನ್ನು (ಪ್ಯಾನ್) ಆಧಾರ್‌ನೊಂದಿಗೆ ಮೊದಲು ಲಿಂಕ್ ಮಾಡುವುದು ಕಡ್ಡಾಯವಾಗಿದೆ. ಇಷ್ಟರ ವೇಳೆಗೆ ಎಲ್ಲರೂ ಲಿಂಕ್ ಮಾಡಬೇಕಾಗಿತ್ತು, ಇನ್ನೂ ಕೂಡ ಲಿಂಕ್ ಮಾಡದಿದ್ದರೆ ಅದಕ್ಕಾಗಿ, ಲಿಂಕ್ ಮಾಡುವ ಪ್ರಕ್ರಿಯೆಯನ್ನು ಪ್ರಾರಂಭಿಸಲು ಜನರು ರೂ 1000 ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಒಂದು ವೇಳೆ ಲಿಂಕ್ ಮಾಡದಿದ್ದರೆ ಪಾನ್ ಕಾರ್ಡನ್ನು ನಿಷ್ಕ್ರಿಯಗೊಳಿಸಲಾಗುತ್ತದೆ.

ಆಧಾರ್ ಕಾರ್ಡ್ ಜೊತೆಗೆ ಪ್ಯಾನ್ ಕಾರ್ಡ್ ಲಿಂಕ್ ಮಾಡುವುದು ಹೇಗೆ?:

ಹಂತ 1: ಮೊದಲಿಗೆ ಆಧಾರ್ ಕಾರ್ಡ್ ಜೊತೆಗೆ ಪಾನ್ ಕಾರ್ಡ್ ಅನ್ನು ಲಿಂಕ್ ಮಾಡಲು ಅಧಿಕೃತ ಜಾಲತಾಣಕ್ಕೆ ತೆರಳಬೇಕು ಅದಕ್ಕಾಗಿ, ಇಲ್ಲಿ ಕ್ಲಿಕ್ ಮಾಡಿ.

ಹಂತ 2: ‘ ಕ್ವಿಕ್ ಲಿಂಕ್ಸ್ ‘ ವಿಭಾಗದ ಅಡಿಯಲ್ಲಿ , ನೀವು ‘ ಲಿಂಕ್ ಆಧಾರ್ ‘ ಆಯ್ಕೆಯನ್ನು ಕಾಣಬಹುದು , ಅದರ ಮೇಲೆ ಕ್ಲಿಕ್ ಮಾಡಿ.

ಹಂತ 3: ಮುಂದಿನ ಪುಟದಲ್ಲಿ, ನಿಮ್ಮ ಹೆಸರು, ಮೊಬೈಲ್ ಸಂಖ್ಯೆ, ಆಧಾರ್ ಸಂಖ್ಯೆ ಮತ್ತು ಪ್ಯಾನ್ ಅನ್ನು ನಮೂದಿಸಿ.

ಹಂತ 4: ನಂತರ, ‘ ನಾನು ನನ್ನ ಆಧಾರ್ ವಿವರಗಳನ್ನು ಮೌಲ್ಯೀಕರಿಸುತ್ತೇನೆ ‘ ಎಂಬ  ಆಯ್ಕೆಯನ್ನು ಕ್ಲಿಕ್ ಮಾಡುವ ಮೂಲಕ ಒದಗಿಸಲಾದ ಮಾಹಿತಿಯನ್ನು ಪರಿಶೀಲಿಸಿ .

ಹಂತ 5: ಮುಂದುವರೆದು ಸ್ವೀಕರಿಸಿದ ಓಟಿಪಿಯನ್ನು ನಮೂದಿಸಿ ಮತ್ತು  ವ್ಯಾಲಿಡೇಟ್  ಮೇಲೆ ಕ್ಲಿಕ್ ಮಾಡಿ.

ಹಂತ 6: ದಂಡವನ್ನು ಪಾವತಿಸಿ, ಇದಾದ  ನಂತರ, ಪ್ಯಾನ್ ಮತ್ತು ಆಧಾರ್ ಲಿಂಕ್ ಮಾಡುವ ಪ್ರಕ್ರಿಯೆಯು ಪೂರ್ಣಗೊಳ್ಳುತ್ತದೆ.

ಕೊನೆಯ ದಿನದೊಳಗೆ ತಪ್ಪದೇ ಎಲ್ಲರೂ ಆಧಾರ್ ಕಾರ್ಡ್ ನೊಂದಿಗೆ ಪಾನ್ ಲಿಂಕ್ ಮಾಡಿ, ಈ ಜೋಡಣೆ ಕಡ್ಡಾಯವಾಗಿರುವುದರಿಂದ, ಈ ಕೂಡಲೇ ಈ ಲೇಖನವನ್ನು ನಿಮ್ಮ ಎಲ್ಲಾ ಸ್ನೇಹಿತ ಮಿತ್ರರಿಗೂ, ಬಂಧುಗಳಿಗೂ ಹಾಗೂ ಪಾನ್ ಕಾರ್ಡ್ ಹೊಂದಿದವರಿಗೂ ಶೇರ್ ಮಾಡಿ, ಧನ್ಯವಾದಗಳು.

Previous Post Next Post

Ads

Ads

نموذج الاتصال

×