KMF Tumul ನೇಮಕಾತಿ (Recruitment) 2023:
ತುಮಕೂರು ಸಹಕಾರಿ ಹಾಲು ಉತ್ಪಾದನಾ ಒಕ್ಕೂಟ ನಿಯಮದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಸಹಾಯಕ ವ್ಯವಸ್ಥಾಪಕ, ಜೂನಿಯರ್ ತಂತ್ರಜ್ಞ ಹೀಗೆ ಹಲವಾರು ಹುದ್ದೆಗಳು ಖಾಲಿ ಇದ್ದು, ಒಟ್ಟು 219 ಹುದ್ದೆಗಳಿಗೆ ಅರ್ಜಿಯನ್ನು ಆನ್ಲೈನ್ ಮುಖಾಂತರ ಸಲ್ಲಿಸಬಹುದಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಇಂದಿನಿಂದ ಅಂದರೆ 18 ಮಾರ್ಚ್ 2023ರಿಂದ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಈ ಹುದ್ದೆಗಳಿಗೆ ಸಂಬಂಧಪಟ್ಟ ಸಂಪೂರ್ಣ ಮಾಹಿತಿ ಕೆಳಗಿನಂತಿದೆ.
ಹುದ್ದೆಯ ವಿವರ :
ಹುದ್ದೆಯ ಹೆಸರು ಮತ್ತು ಖಾಲಿ ಹುದ್ದೆಗಳ ಸಂಖ್ಯೆ :
- ಸಹಾಯಕ ವ್ಯವಸ್ಥಾಪಕ: 28
- ವೈದ್ಯಕೀಯ ಅಧಿಕಾರಿ: 1
- ಆಡಳಿತಾಧಿಕಾರಿ: 1
- ಖರೀದಿ/ಸ್ಟೋರ್ಕೀಪರ್: 3
- MIS/ಸಿಸ್ಟಮ್ ಅಧಿಕಾರಿ: 1
- ಅಕೌಂಟ್ಸ್ ಆಫೀಸರ್: 2
- ಮಾರುಕಟ್ಟೆ ಅಧಿಕಾರಿ: 3
- ತಾಂತ್ರಿಕ ಅಧಿಕಾರಿ: 14
- ತಂತ್ರಜ್ಞ: 1
- ವಿಸ್ತರಣಾಧಿಕಾರಿ: 22
- MIS ಸಹಾಯಕ ದರ್ಜೆ-I: 2
- ಆಡಳಿತ ಸಹಾಯಕ ಗ್ರೇಡ್-2: 13
- ಅಕೌಂಟ್ಸ್ ಅಸಿಸ್ಟೆಂಟ್ ಗ್ರೇಡ್-2: 12
- ಮಾರ್ಕೆಟಿಂಗ್ ಸಹಾಯಕ ಗ್ರೇಡ್-2: 18
- ಖರೀದಿ ಸಹಾಯಕ ಗ್ರೇಡ್-2: 6
- ರಸಾಯನಶಾಸ್ತ್ರಜ್ಞ ಗ್ರೇಡ್-2: 4
- ಜೂನಿಯರ್ ಸಿಸ್ಟಮ್ ಆಪರೇಟರ್: 10
- ಕೋ-ಆರ್ಡಿನೇಟರ್ (ರಕ್ಷಣೆ): 2
- ಟೆಲಿಫೋನ್ ಆಪರೇಟರ್: 2
- ಜೂನಿಯರ್ ತಂತ್ರಜ್ಞ: 64
- ಚಾಲಕರು: 8
- ಲ್ಯಾಬ್ ಸಹಾಯಕ: 2
ಒಟ್ಟು ಖಾಲಿ ಹುದ್ದೆಗಳು : 219
ವಿದ್ಯಾರ್ಹತೆ ಏನಿರಬೇಕು?:
ಮೇಲಿನ ಹುದ್ದೆಗಳಲ್ಲಿ ಕೆಲಸವನ್ನು ಮಾಡಲು ಅಭ್ಯರ್ಥಿಗಳು 10ನೇ ತರಗತಿ, ಪಿಯುಸಿ, ಡಿಪ್ಲೋಮ ಹಾಗೂ ಯಾವುದೇ ಪದವಿಯಲ್ಲಿ ಉತ್ತೀರ್ಣರಾಗಿರಬೇಕು.
ಸಂಬಳ ಎಷ್ಟು?:
ರೂ.21,400-97,100/- ಪ್ರತಿ ತಿಂಗಳು
ವಯೋಮಿತಿ :
ಕನಿಷ್ಠ 18 ವರ್ಷಗಳಿಂದ ಗರಿಷ್ಟ 35 ವರ್ಷಗಳ ಒಳಗಿರಬೇಕು.
ಆಯ್ಕೆ ಪ್ರಕ್ರಿಯೆ :
ಲಿಖಿತ ಪರೀಕ್ಷೆ
ಸಂದರ್ಶನ
ಅರ್ಜಿಯನ್ನು ಸಲ್ಲಿಸುವ ವಿಧಾನ :
- ಮೊದಲಿಗೆ ಆನ್ಲೈನ್ ಮುಖಾಂತರ ಅರ್ಜಿಯನ್ನು ಸಲ್ಲಿಸಲು ಅಧಿಕೃತ ಜಾಲತಾಣಕ್ಕೆ ತೆರಳಬೇಕು. ಅದಕ್ಕಾಗಿ Click Here
- ನೊಂದಣಿಯನ್ನು ಮಾಡಿಕೊಳ್ಳಿ ನಂತರ ಲಾಗಿನ್ ಆಗಿ.
- ಅರ್ಜಿ ನಮೂನೆಯನ್ನು ಪೂರ್ಣವಾಗಿ ಭರ್ತಿ ಮಾಡಿ.
- ಕೇಳಲಾದ ದಾಖಲೆಗಳನ್ನು ಅಪ್ಲೋಡ್ ಮಾಡಿ
- ಸಲ್ಲಿಸು ಬಟನ್ ಮೇಲೆ ಕ್ಲಿಕ್ ಮಾಡುವ ಮೂಲಕ ಅರ್ಜಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ.
ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕ :17 ಏಪ್ರಿಲ್, 2023
ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಈ ಕೂಡಲೇ ಅರ್ಜಿಯನ್ನು ಸಲ್ಲಿಸಿ ಕೆಲಸವನ್ನು ನಿಮ್ಮದಾಗಿಸಿಕೊಳ್ಳಬಹುದಾಗಿದೆ. ಇಂತಹ ಒಳ್ಳೆಯ ಮಾಹಿತಿಯನ್ನು ಹೊಂದಿರುವ ಈ ಲೇಖನವನ್ನು ಕೂಡಲೇ ನಿಮ್ಮ ಎಲ್ಲಾ ಸ್ನೇಹಿತ ಮಿತ್ರರಿಗೆ ಹಾಗೂ ಬಂಧುಗಳಿಗೆ ಶೇರ್ ಮಾಡಿ, ಧನ್ಯವಾದಗಳು.
0 Comments