Katera : KGF ಅನ್ನೂ ಮೀರಿಸುತ್ತಂತೆ ಕಾಟೇರ! ಪ್ರಶಾಂತ್ ನೀಲ್ ಗೆ ಠಕ್ಕರ್ ಕೊಡಲು ರೆಡಿ ಅಂದ್ರಾ ತರುಣ್ ಸುಧೀರ್!



Katera : ಡಿ ಬಾಸ್ ದರ್ಶನ್(Darshan) ಅಭಿನಯದ ‘ಕ್ರಾಂತಿ'(Kranti) ಸಿನಿಮಾ ಯಾವ ರೀತಿ ಸದ್ದು ಮಾಡಿತ್ತು ಅಂತ ನಿಮಗೆಲ್ಲರಿಗೂ ಗೊತ್ತು. ಕ್ರಾಂತಿ ಸಿನಿಮಾಗೆ ಬೇರೆ ಯಾವುದೇ ನಟರಿಂದ ಅಷ್ಟೊಂದು ಸಪೋರ್ಟ್ ಇರಲಿಲ್ಲ ಅನ್ನೋದು ಅಭಿಮಾನಿಗಳ ಮಾತು. ಹಾಗೆಯೇ ಕನ್ನಡದ ನ್ಯೂಸ್ ಚಾನೆಲ್ ಗಳಿಂದ ಕೂಡ ಯಾವುದೇ ರೀತಿಯ ಬೆಂಬಲ ಇರಲಿಲ್ಲ. ನ್ಯೂಸ್ ಚಾನೆಲ್ ಗಳು ಕೂಡ ಒಂಥರಾ ಬಾಯ್ಕಾಟ್ ದರ್ಶನ್ ಅನ್ನೋ ರೀತಿ ವರ್ತಿಸಿದವು.

ಅಂತಹ ಕಷ್ಟದ ಸಮಯದಲ್ಲೂ ಡಿ ಬಾಸ್ ಅವರನ್ನ ಕೈ ಹಿಡಿದಿದ್ದು ಅವರ ಅಸಂಖ್ಯಾತ ಅಭಿಮಾನಿಗಳು ಹಾಗು ಕನ್ನಡದ ಎಲ್ಲಾ ಯೌಟ್ಯುಬರ್ಸ್. ಇನ್ನು ಕನ್ನಡದ ನ್ಯೂಸ್ ಚಾನೆಲ್ ಗಳು ಡಿ ಬಾಸ್ ಅವರನ್ನ ಬ್ಯಾನ್ ಮಾಡಿದಾಗ ಎಷ್ಟೋ ಜನ ಇನ್ನು ಡಿ ಬಾಸ್ ಅವರ ಕೆರಿಯರ್ ಮುಗಿಯಿತು ಅಂತ ತಿಳ್ಕೊಂಡಿದ್ದರು. ಇಂತಹ ಕಷ್ಟದ ಸಮಯದಲ್ಲಿ ಅವರ ಅಭಿಮಾನಿಗಳು ಖುದ್ದಾಗಿ ಕ್ರಾಂತಿ ಸಿನಿಮಾದ ಪ್ರಮೋಷನ್ ದೊಡ್ಡಮಟ್ಟದಲ್ಲಿ ಮಾಡ್ತಾರೆ. ಅದಕ್ಕಿಂತ ಹೆಚ್ಚಾಗಿ ದರ್ಶನ್ ಅವರ D56 ಅಂದ್ರೆ ಕಾಟೇರ ಸಿನಿಮಾಗೆ ಈವಾಗಲೇ ಕ್ರೇಜ್ ತುಂಬಾನೇ ಹೆಚ್ಚಾಗಿದೆಯಂತೆ.

ಕಾಟೇರ ಸಿನಿಮಾದ ಟೈಟಲ್ ಅನೌನ್ಸ್ ಆದಾಗಿನಿಂದ ಅಭಿಮಾನಿಗಳು ಈ ಚಿತ್ರಕ್ಕಾಗಿ ಕಾಯುತ್ತಿದ್ದಾರೆ. ಹಾಗೆ ಯೌಟ್ಯೂಬ್ ನಲ್ಲೂ ಕೂಡ ಕಾಟೇರ ಸಿನಿಮಾ ತುಂಬಾನೇ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ದರ್ಶನ್ ಅವರ ಸಿನಿಮಾ ಅಂದ್ರೇನೆ ಹಾಗೆ, ಎಲ್ಲಾ ಕಡೆ ಬಹಳಾನೇ ಕ್ರೇಜ್ ಕ್ರಿಯೇಟ್ ಆಗುತ್ತೆ. ಬೇರೆ ಯಾವುದೇ ಕನ್ನಡದ ಚಿತ್ರ ನಟರಿಗೆ ಈ ರೀತಿಯ ಕ್ರೇಜ್ ಇರುವುದಕ್ಕೆ ಸಾಧ್ಯನೇ ಇಲ್ಲ ಅನ್ನೋದು ಅಭಿಮಾನಿಗಳ ವಾದ. ಇದು ದರ್ಶನ್ ಅವರು ಕನ್ನಡ ಚಿತ್ರರಂಗದಲ್ಲಿ ಮೆಂಟೈನ್ ಮಾಡಿಕೊಂಡು ಬಂದಿರುವ ಹವಾ ಅಂತಾನೆ ಹೇಳಬಹುದು.

ಕಾಟೇರ ಚಿತ್ರದ ನಿರ್ದೇಶಕ ಕೂಡ ಈ ರೀತಿಯ ಸಿನಿಮಾ ಹಿಂದೆ ಯಾವತ್ತು ಬಂದಿಲ್ಲ, ಮುಂದೆ ಯಾವತ್ತೂ ಬರಲ್ಲ ಎಂಬ ಮಾತನ್ನ ಆಡಿದ್ದಾರೆ. ಇದು ಡೈರೆಕ್ಟಾಗಿ ಕೆಜಿಎಫ್ ಚಿತ್ರಕ್ಕೆ ಟಾಂಗ್ ಕೊಟ್ಟಿರುವ ಹಾಗಿದೆ. ಕಾಟೇರ ಸಿನಿಮಾ ತುಂಬಾ ದೊಡ್ಡಮಟ್ಟದಲ್ಲಿ ಸಕ್ಸಸ್ ಆಗುವಂತಹ ಸುಳಿವನ್ನ ನಿರ್ದೇಶಕ ತರುಣ್ ಸುಧೀರ್ ಅವರು ನೀಡಿದ್ದಾರೆ. ಇದು ಅಭಿಮಾನಿಗಳಿಗೆ ಖುಷಿ ಕೊಡುವಂತಹ ಸುದ್ಧಿ.

Previous Post Next Post

Ads

Ads

نموذج الاتصال

×