ಕರ್ನಾಟಕದಲ್ಲಿ ಮೊದಲ ಬಾರಿಗೆ.! ಗ್ರಾಮೀಣ ನಿರುದ್ಯೋಗಿ ಯುವಕರಿಗೆ.! 10 ಸಾವಿರ ಹಣ ನೀಡಲು ಸಿಎಂ ಚಾಲನೆ.! ತಪ್ಪದೇ ನೋಡಿ

 ಹಲೋ ಸ್ನೇಹಿತರೇ ನಮಸ್ಕಾರ, ಸರ್ಕಾರವು ಗ್ರಾಮೀಣ ಭಾಗದಲ್ಲಿರುವಂತಹ ಯುವಕರಿಗೆ ಹಲವಾರು ಪ್ರಯೋಜನವನ್ನು ಒದಗಿಸುತ್ತಿದೆ. ಹಾಗೆಯೇ ನಿರುದ್ಯೋಗಿ ಯುವಕರಿಗೆ ಉದ್ಯೊಗವಕಾಶ ಒದಗಿಸಲು ಸರ್ಕಾರವು ಹಲವಾರು ಅವಕಾಶವನ್ನು ನೀಡುತ್ತಿದೆ. ಎಲ್ಲ ಯುವಕರಿಗೂ ಕೂಡ ಸರ್ಕಾರವು ಇದೀಗ ಸಹಾಯಧನವನ್ನು ನೀಡಲು ಮುಂದಾಗಿದೆ. ಯುವಕರ ಸಬಲೀಕರಣದ ದೃಷ್ಠಿಯಿಂದ ಇಂತಹ ಯೋಜನೆಯನ್ನು ಸರ್ಕಾರ ಜಾರಿಗೆ ತರುತ್ತಿದೆ. ಇದರ ಎಲ್ಲಾ ಸಂಪೂರ್ಣ ಮಾಹಿತಿಯನ್ನು ಈ ಕೆಳಗಿನ ಲೇಖನದಲ್ಲಿ ವಿವರವಾಗಿ ತಿಳಿಸಲಾಗಿದೆ. ಎಲ್ಲರೂ ಸಂಪೂರ್ಣವಾಗಿ ನಮ್ಮ ಲೇಖನವನ್ನು ಓದಿ.








ಸರ್ಕಾರವು ನಿರುದ್ಯೊಗ ಯುವಕರಿಗೆ ಹೊಸ ಹೊಸ ಯೋಜನೆಯನ್ನು ಜಾರಿಗೆ ತರುತ್ತದೆ. ಸ್ವಾಮಿ ವಿವೇಕಾನಂದ ಯುವ ಶಕ್ತಿ ಸ್ವ ಸಹಾಯ ಸಂಘಗಳಿಗೆ ಮುಖ್ಯ ಮಂತ್ರಿಯವರು ಚಾಲನೆ ನೀಡಿದ್ದಾರೆ. ಈ ಕುರಿತು ಮುಖ್ಯಮಂತ್ರಿಯವರು ಸರ್ಕಾರದ ಹಿರಿಯ ಅಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್‌ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಸಂಘಗಳ ರಚನೆಯ ಪ್ರಗತಿ ಕುರಿತು ಮಾಹಿತಿಯನ್ನು ಪಡೆದಿದ್ದಾರೆ. 

ಸ್ತ್ರೀ ಶಕ್ತಿ ಸ್ವ ಸಹಾಯ ಗುಂಪುಗಳು ಬಹಳ ವರ್ಷಗಳಿಂದ ಸರ್ಕಿಯವಾಗಿವೆ. ಯುವಕರಿಗಾಗಿ ಮೊದಲ ಬಾರಿಗೆ ಸ್ವ ಉದ್ಯೊಗವನ್ನು ಕೈಗೊಳ್ಳಲು ಇಂತಹ ಯೋಜನೆಯನ್ನು ರೂಪಿಸಲು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಗಳು ಹೆಚ್ಚಿನ ಆದ್ಯತೆಯೊಂದಿಗೆ ಕಾರ್ಯನಿರ್ವಹಿಸಬೇಕು. ಜಂಟಿ ಭಾದ್ಯತಾ ಗುಂಪುಗಳ ರಚನೆಯಿಂದಾಗಿ ಸುತ್ತು ನಿಧಿ ಹಂಚಿಕೆಯೊಂದಿಗೆ ನಿಮ್ಮ ಕೆಲಸ ಮುಗಿಯುವುದಿಲ್ಲ. ಈ ಗುಂಪುಗಳು ಯೋಜನೆಯನ್ನು ಗುರುತಿಸಿ ಬ್ಯಾಂಕಿನಿಂದ ಸಾಲ ಸೌಲಭ್ಯ ಪಡೆದು ತಮ್ಮ ಉದ್ದಿಮೆಯನ್ನು ಸ್ಥಾಪಿಸಿ ಉತ್ಪಾದನೆಗೆ ಪ್ರಾಂಭಿಸುವವರೆಗೂ ನೀವು ಅವರಿಗೆ ಮಾರ್ಗದರ್ಶನ ನೀಡಬೇಕಾಗಿದೆ ಎಂದು ಸೂಚಿಸಲಾಗಿದೆ.

ಯೋಜನೆಗಳನ್ನು ಗುರುತಿಸಲು ನಿಯೋಜಿಸಿರುವ ಸಮಾಲೋಚಕರು ಯುವಕರು ಕೈಗೊಳ್ಳುವ ಯೋಜನೆಗೆ ಅನುಗುಣವಾಗಿ ಆಯಾ ಕ್ಷೇತ್ರದ ಪರಿಣಿತರಿಂದಲೇ ತರಬೇತಿ ನೀಡಬೇಕು. ಆಗ ಮಾತ್ರ ಯೋಜನೆ ಯಶಸ್ವಿಯಾಗುತ್ತದೆ ಎಂದು ತಿಳಿಸಲಾಗಿದೆ. ಯುವ ಶಕ್ತಿ ಸಂಘಗಳಿಗೆ ಸಾಲವನ್ನು ನೀಡುವಾಗ ಯೋಜನಾ ಮೊತ್ತ ಹೆಚ್ಚಾಗಿದ್ದು, ಅವು ಲಾಭದಾಯಕ ಯೋಜನೆಗಳಾದರೆ ಬ್ಯಾಂಕುಗಳು ಸರ್ಕಾರ ನಿಗದಿಪಡಿಸಿದ 5 ಲಕ್ಷ ರೂ ಮಿತಿಗಿಂತ ಹೆಚ್ಚಿನ ಮೊತ್ತದ ಸಾಲ ಮಂಜೂರು ಮಾಡಿ ಯುವಕರನ್ನು ಬೆಂಬಲಿಸಬೇಕೆಂದು ಮುಖ್ಯಮಂತ್ರಿಗಳು ಬ್ಯಾಂಕುಗಳಿಗೆ ಸಲಹೆ ನೀಡಿದ್ದಾರೆ.

 ರಾಜ್ಯದಲ್ಲಿ ಒಟ್ಟು 951 ಗ್ರಾಮ ಪಂಚಾಯಿತಿಗಳು ಇದ್ದು, ಸ್ವಾಮಿ ವಿವೇಕಾನಂದ ಯುವಶಕ್ತಿ ಯೋಜನೆಯಡಿ ಪ್ರತಿ ಗ್ರಾಮ ಪಂಚಾಯಿತಿಗೆ 2 ಜಂಟಿ ಬಾದ್ಯತಾ ಗುಂಪುಗಳನ್ನು ರಚಿಸಲು ಆರ್ಥಿಕ ಇಲಾಖೆಯ ಸಹಮತಿ ಅನ್ವಯ ಆದೇಶವನ್ನು ಹೊರಡಿಸಲಾಗಿದೆ. ಅದರ ಅನ್ವಯ ಮಾರ್ಚ್‌ ಅಂತ್ಯಕ್ಕೆ ಒಟ್ಟು 6,509 ಜಂಟಿ ಭಾದ್ಯತಾ ಗುಂಪುಗಳು ರಚನೆಯಾಗಿವೆ. ಉಳಿದಂತೆ 5,393 ಜಂಟಿ ಭಾದ್ಯತಾ ಗುಂಪುಗಳು ರಚನೆಯಾಗಬೇಕಿದೆ. ಈಗಾಗಲೇ 754 ಜಂಟಿ ಭಾದ್ಯತಾ ಗುಂಪುಗಳಿಗೆ ತಲಾ ರೂ 10 ಸಾವಿರದಂತೆ, ಒಟ್ಟು ರೂ1.75 ಕೋಟಿಗಳ ವೆಚ್ಚದಲ್ಲಿ ಮತ್ತು ನಿಧಿಯನ್ನು ಪಾವತಿಸಲಾಗಿದೆ. 100 ಮಾದರಿಯ ಪ್ರಸ್ತಾವನೆಗಳನ್ನು ಬ್ಯಾಂಕಿಗೆ ಸಲ್ಲಿಸಲಾಗಿದ್ದು, ಈ ಪೈಕಿ ಸುಮಾರು 551 ಯೋಜನೆಗಳನ್ನು ಬ್ಯಾಂಕುಗಳ ಅನಮೋದನೆ ಮತ್ತು ಸಾಲ ಮಂಜೂರಾತಿಗೆ ಸಲ್ಲಿಸಲಾಗಿದೆ.

Previous Post Next Post

Ads

Ads

نموذج الاتصال

×