VIDEO : ಟೆರೆಸ್ ನಲ್ಲಿ ಬಾಯ್ ಫ್ರೆಂಡ್ ಜೊತೆ ಸರಸ : ಅಮ್ಮನ ಕೈಗೆ ಸಿಕ್ಕಿ ಬಿದ್ದ ಮಗಳಿಗೆ ಗ್ರಹಚಾರ ಬಿಡಿಸಿದ ತಾಯಿ

 












ಸಾಮಾಜಿಕ ಜಾಲತಾಣಗಳಲ್ಲಿ ದಿನವೊಂದಕ್ಕೆ ಸಾವಿರಗಳ ಸಂಖ್ಯೆಯಲ್ಲಿ ಹೊಸ ಹೊಸ ವೀಡಿಯೋಗಳು ಶೇರ್ ಆಗುತ್ತವೆ. ಇವು ವೈವಿಧ್ಯಮಯ ವಿಷಯಗಳಿಗೆ ಸಂಬಂಧಪಟ್ಟಂತಹ ವಿಡಿಯೋ ಗಳಾಗಿರುತ್ತವೆ. ಇಂತಹ ವೀಡಿಯೋಗಳಲ್ಲಿ ತಮಾಷೆಯ ವೀಡಿಯೋಗಳು ಸಾಕಷ್ಟು ವೈರಲ್ ಆಗುತ್ತದೆ. ಅಲ್ಲದೇ ಇಂತಹ ವಿಡಿಯೋ ಗಳಿಗೆ ನೆಟ್ಟಿಗರಿಂದ ಸಿಗುವ ಪ್ರತಿಕ್ರಿಯೆಗಳನ್ನು ನೋಡಿ ಅಂತಹ ವೀಡಿಯೋಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಅಪ್ಲೋಡ್ ಮಾಡಲಾಗುತ್ತದೆ. 

 ಈ ವೀಡಿಯೋಗಳನ್ನು ನೋಡಿದಾಗ ನಮಗೂ ಕೂಡಾ ನಗು ತಡೆಯಲು ಸಾಧ್ಯವಾಗುವುದಿಲ್ಲ. ಅಂತಹ ಒಂದು ವೀಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡಮಟ್ಟದಲ್ಲಿ ವೈರಲ್ ಆಗಿದ್ದು, ಇದನ್ನು ನೋಡಿದವರೆಲ್ಲರೂ ಹೊಟ್ಟೆ ಹುಣ್ಣಾಗುವಂತೆ ನಗುತ್ತಿದ್ದಾರೆ ಜೊತೆಗೆ ಅಚ್ಚರಿ ಪಡುತ್ತಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಬಾಯ್ ಫ್ರೆಂಡ್, ಗರ್ಲ್ ಫ್ರೆಂಡ್ ಟ್ರೆಂಡ್ ಬಹಳ ಹೆಚ್ಚಾಗಿದೆ.

ಮನೆಯ ಹಿರಿಯರ ಭಯವಿಲ್ಲದೆ ಬಹಳಷ್ಟು ಜನ ಯುವಕ ಯುವತಿಯರು ತಮ್ಮ ಮನಸ್ಸಿಗೆ ಬಂದಂತೆ ವರ್ತಿಸುತ್ತಾರೆ. ಹದಿಹರೆಯದ ಮನಸ್ಸುಗಳು ಯಾವುದು ಸರಿ, ಯಾವುದು ತಪ್ಪು ಎಂದು ಆಲೋಚನೆ ಮಾಡದೇ ತಮಗೆ ಬೇಕಾದನ್ನು ಮಾಡಲು ಮುಂದಾಗುತ್ತಿದ್ದಾರೆ. ಕಾಲೇಜು ಮೆಟ್ಟಿಲು ಏರುವ ವೇಳೆಗೆ ಹುಡುಗರು ತಮಗೊಬ್ಬ ಗರ್ಲ್ ಫ್ರೆಂಡ್ , ಹುಡುಗಿಯರು ತಮಗೊಬ್ಬ ಬಾಯ್ ಫ್ರೆಂಡ್ ಇರಲೇಬೇಕು ಎನ್ನುವ ಹಂತವನ್ನು ತಲುಪಿದ್ದಾರೆ. ಆದರೆ ಇಲ್ಲೊಬ್ಬ ಯುವತಿಗೆ ಬಾಯ್ ಫ್ರೆಂಡ್ ನ ಕಾರಣದಿಂದ ತಾಯಿಯ ಕೈಯಲ್ಲಿ ಸರಿಯಾದ ಪೂಜೆ ನಡೆದಿದೆ. ಪ್ರೇಮಿಗಳ ದಿನ ಕಳೆದು ಕೆಲವೇ ದಿನಗಳಾಗಿದೆ. ಪ್ರೇಮಿಗಳ ದಿನದಂದು ತಾವು ಪ್ರೀತಿಸಿದವರನ್ನು ಭೇಟಿಯಾಗಲೇಬೇಕು ಎನ್ನುವುದು ಬಹಳಷ್ಟು ಜನರ ಆಸೆಯಾಗಿರುತ್ತದೆ. ಇಂತಹ ಸನ್ನಿವೇಶದಲ್ಲಿ ಹುಡುಗಿಯೊಬ್ಬಳು ಮಾಡಿದ ಆಲೋಚನೆ ಆಕೆಗೆ ಕಂಟಕವನ್ನು ತಂದಿದೆ. 

ಮನೆಯಿಂದ ಹೊರಗೆ ಹೋಗುವುದು ಸುಲಭದ ಕೆಲಸವಲ್ಲ ಎಂದು ತಿಳಿದ ಯುವತಿಯೊಬ್ಬಳು ತನ್ನ ಮನೆಯ ಟೆರೇಸ್ ಗೆ ಬಾಯ್ ಫ್ರೆಂಡ್ ಅನ್ನು ಕರೆಸಿಕೊಂಡು ಅವನನ್ನು ಭೇಟಿ ಮಾಡಿದ್ದಾಳೆ. ಆದರೆ ದುರಾದೃಷ್ಟವಶಾತ್ ಅವಳು ತನ್ನ ಬಾಯ್ ಫ್ರೆಂಡ್ ಜೊತೆಗೆ ತಾಯಿಯ ಕೈಗೆ ಸಿಕ್ಕಿಬಿದ್ದಿದ್ದಾಳೆ. ಈ ಘಟನೆಯು ಉತ್ತರ ಭಾರತದ್ದು ಎಂದು ಹೇಳಲಾಗುತ್ತಿದೆ. ಮಗಳು ಬಾಯ್ ಫ್ರೆಂಡ್ ಜೊತೆ ಇರುವುದನ್ನು ನೋಡಿದ ತಾಯಿ ಸಿಟ್ಟಾಗಿದ್ದಾರೆ. ಅವರು ಚಪ್ಪಲಿ ಎತ್ತಿಕೊಂಡು ಇಬ್ಬರನ್ನು ಹೊಡೆಯಲು ಮುಂದಾಗಿದ್ದಾರೆ. ಇಡೀ ದೃಶ್ಯವೂ ವೀಡಿಯೋದಲ್ಲಿ ಸೆರೆಯಾಗಿದ್ದು, ಇದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡ ಮೇಲೆ ದೊಡ್ಡಮಟ್ಟದಲ್ಲಿ ವೈರಲ್ ಆಗಿದೆ. ಈ ಘಟನೆ ನಡೆಯುವಾಗ ಅಕ್ಕ ಪಕ್ಕದ ಮನೆಗಳವರು ಆ ದೃಶ್ಯವನ್ನು ವೀಡಿಯೋದಲ್ಲಿ ಸೆರೆ ಹಿಡಿದಿದ್ದಾರೆ ಎನ್ನಲಾಗಿದೆ.

ಮಗಳು ಮತ್ತು ಆಕೆಯ ಬಾಯ್ ಫ್ರೆಂಡ್ ಟೆರೆಸ್ ನಲ್ಲಿ ಇರುವಾಗ ಬರುವ ತಾಯಿ, ಅಡಗಿ ಕುಳಿತ ಮಗಳ ಬಾಯ್ ಫ್ರೆಂಡ್ ಎಲ್ಲಿದ್ದಾನೆ ಎಂದು ಪ್ರತಿ ಮೂಲೆಯಲ್ಲೂ ಹುಡುಕಿ ಬಾಯ್ ಫ್ರೆಂಡ್ ಅನ್ನು ಪತ್ತೆ ಹಚ್ಚಿ, ಮಗಳನ್ನೂ ಕರೆದು ಇಬ್ಬರಿಗೂ ಚಪ್ಪಲಿ ಪೂಜೆ ಮಾಡುವುದನ್ನು ನಾವು ನೋಡಬಹುದಾಗಿದೆ. ಆ ವಿಡಿಯೊ ಕೆಳಗಿದೆ ನೋಡಿ…

Previous Post Next Post

Ads

Ads

نموذج الاتصال

×